ಸಿಲಿಂಡರ್ ಸ್ಪೋಟ – ಮನೆ ಬೆಂಕಿಗಾಹುತಿ

ಹಾಸನ: ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆ ಬೆಂಕಿಗಾಹುತಿಯಾಗಿರುವ ಘಟನೆ ಹಾಸನದ ಸಿದ್ದಯ್ಯ ನಗರದಲ್ಲಿ ನಡೆದಿದೆ.

ಮನ್ಸೂರ್ ಎಂಬವರಿಗೆ ಸೇರಿದ ಮನೆ ಸಿಲಿಂಡರ್ ಸ್ಪೋಟದಿಂದ ಸುಟ್ಟು ಹೋಗಿದೆ. ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಳ್ಳುತ್ತಿದ್ದಂತೆ ಮನ್ಸೂರ್ ಮನೆಯವರು ಮನೆಯಿಂದ ಹೊರಗಡೆ ಓಡಿ ಬಂದ ಪರಿಣಾಮ, ಭಾರೀ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: ಅಲ್ಪ ಸಂಖ್ಯಾಂತರನ್ನ ಮುಂದಿಟ್ಟುಕೊಂಡು ಸಮಾಜ ವಿಭಜನೆ ಬೇಡ: ಯು.ಟಿ.ಖಾದರ್

ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಮಾಲೀಕ ಮನ್ಸೂರ್ ಎಲೆಕ್ಟ್ರಾನಿಕ್ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಇದೀಗ ಮನೆ ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ದಿನಬಳಕೆಯ ವಸ್ತುಗಳೂ ಕೂಡ ಸುಟ್ಟು ಕರಕಲಾಗಿದೆ. ಪರಿಣಾಮ ಆ ಕುಟುಂಬದವರ ಜೀವನ ನಿರ್ವಹಣೆಯೇ ಕಷ್ಟದಲ್ಲಿ ಸಿಲುಕುವಂತೆ ಆಗಿದೆ. ಮನೆ ಸುಟ್ಟು ಹೋಗಿರುವುದರಿಂದ ಮುಂದೇನು ಮಾಡಬೇಕೆಂದು ತಿಳಿಯದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ.

Comments

Leave a Reply

Your email address will not be published. Required fields are marked *