ಪೆಥಾಯ್ ಚಂಡಮಾರುತ ಎಫೆಕ್ಟ್: ಕರ್ನಾಟಕದಲ್ಲಿ ಹೆಚ್ಚಾಯ್ತು ಚಳಿ!

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಪೆಥಾಯ್ ಚಂಡಮಾರುತದ ಅಬ್ಬರದಿಂದ ರಾಜ್ಯದಲ್ಲಿ ಮೋಡದ ಜೊತೆಗೆ ಚಳಿಯ ಪ್ರಮಾಣವೂ ಹೆಚ್ಚಾಗಿದೆ.

ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ ಸುಮಾರು 7 ಗಂಟೆಯವರೆಗೂ ಕೊರೆಯುವ ಚಳಿಯಿದೆ. ಸೋಮವಾರ ಬೆಂಗಳೂರು ಗ್ರಾಮಾಂತರದಲ್ಲಿ 11.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಅತಿಕಡಿಮೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಹಿಮದಿಂದ ಕೂಡಿದ ಚಳಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಎಷ್ಟು?
ಸೋಮವಾರ ಬೆಂಗಳೂರು ಗ್ರಾಮಾಂತರ 11.8 ಡಿಗ್ರಿ, ಹಾಸನ 11.9 ಡಿಗ್ರಿ, ಕೊಡಗು 12.4 ಡಿಗ್ರಿ, ಬೆಂಗಳೂರು ನಗರದಲ್ಲಿ 12.8 ಡಿಗ್ರಿ ತಾಪಮಾನ ದಾಖಲಾಗಿದೆ.

ಉಡುಪಿಯಲ್ಲಿ ಅತಿ ಹೆಚ್ಚು 20.1 ಡಿಗ್ರಿ ತಾಪಮಾನ ದಾಖಲಾಗಿದೆ. ದಕ್ಷಿಣ ಕನ್ನಡ 19 ಡಿಗ್ರಿ, ಉತ್ತರ ಕನ್ನಡ 17.7 ಡಿಗ್ರಿ, ಬಳ್ಳಾರಿ 15.9 ಡಿಗ್ರಿ, ಬಾಗಲಕೋಟ 14.6 ಡಿಗ್ರಿ, ಬೀದರ್ 14.5 ಡಿಗ್ರಿ, ಚಿಕ್ಕಬಳ್ಳಾಪುರ 13.2 ಡಿಗ್ರಿ, ಚಿಕ್ಕಮಗಳೂರು 13.3 ಡಿಗ್ರಿ, ಹಾವೇರಿ 14.6 ಡಿಗ್ರಿ, ಕಲಬುರಗಿ 14.7 ಡಿಗ್ರಿ, ಧಾರವಾಡ 13.5 ಡಿಗ್ರಿ ತಾಪಮಾನ ದಾಖಲಾಗಿದೆ.

ಆಂಧ್ರ, ತಮಿಳುನಾಡಲ್ಲಿ ಭಾರೀ ಮಳೆ:
ಪೆಥಾಯಿ ಚಂಡಮಾರುತ ಸೋಮವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಅಪ್ಪಳಿಸಿದೆ. ಈಗ ಆಂಧ್ರ, ತಮಿಳುನಾಡು ಕರಾವಳಿ ಭಾಗದಲ್ಲಿ ಮಳೆಯಬ್ಬರ ಜೋರಾಗಿದ್ದು, ಸಾವಿರಾರು ಜನ ಅತಂತ್ರರಾಗಿದ್ದಾರೆ. ಅಲ್ಲದೆ ಆಂಧ್ರದಲ್ಲಿ ಈಗಾಗಲೇ ನಾಲ್ವರು ಬಲಿಯಾಗಿದ್ದಾರೆ. ಅಮಲಾಪುರದಲ್ಲಿ ಚಂಡಮಾರುತದ ಮಳೆಯ ನೀರಿನ ಜೊತೆಗೆ ಗ್ರಾಮದೊಳಗೆ ಮೀನುಗಳು ಬರುತ್ತಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

 

Comments

Leave a Reply

Your email address will not be published. Required fields are marked *