ಚಲಿಸುವ ರೈಲಿನ ಮೇಲೆ ಸೈಕ್ಲಿಂಗ್ ಮಾಡಲು ಹೋದ್ರು- ಮುಂದೇನಾಯ್ತು? ವಿಡಿಯೋ ನೋಡಿ

ಮಾಸ್ಕೋ: ರಷ್ಯಾದ ಇಬ್ಬರು ಸಾಹಸಪ್ರಿಯರು ಚಲಿಸುವ ರೈಲಿನ ಮೇಲೆ ಸೈಕಲ್ ಸವಾರಿ ಮಾಡಲು ಮುಂದಾಗಿ ಅಪಾಯಕ್ಕೆ ಆಮಂತ್ರಣ ನೀಡಿದ್ದರು. ಇವರ ಈ ಸಾಹಸ ಯತ್ನದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಇವರಲ್ಲಿ ಒಬ್ಬ ಒಂದು ಕೈಯಲ್ಲಿ ಸೈಕಲ್ ಹಿಡಿದುಕೊಂಡು ರೈಲಿನ ಕೊನೆಯ ಬೋಗಿಯ ಮೇಲೆ ಹತ್ತಿದ್ದಾನೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಆತನಿಗೆ ಮೇಲೇರಲು ಸಹಾಯ ಮಾಡಿದ್ದಾನೆ. ನಂತರ ಒಬ್ಬರ ನಂತರ ಒಬ್ಬರು ಚಲಿಸುವ ರೈಲಿನ ಮೇಲೆ ಸೈಕಲ್ ಸವಾರಿ ಮಾಡಲು ಪ್ರಯತ್ನಿಸಿದ್ದಾರೆ.

ಮೊದಲನೆಯವನು ಸೈಕಲ್ ಹತ್ತಿ ಪೆಡಲ್ ತುಳಿದ ತಕ್ಷಣ ಸೈಕಲ್ ಪಕ್ಕಕ್ಕೆ ವಾಲಿದೆ. ಅವನ ನಸೀಬು ಚೆನ್ನಾಗಿದ್ದಿದ್ದರಿಂದ ರೈಲಿನ ಮೇಲೇ ಬಿದ್ದು ಬದುಕುಳಿದಿದ್ದಾನೆ. ಒಂದು ವೇಳೆ ಸೈಕಲ್ ಎಡಕ್ಕೋ ಬಲಕ್ಕೋ ಚಲಿಸಿದ್ದರೆ ಪ್ರಾಣಕ್ಕೇ ಕುತ್ತಾಗುತ್ತಿತ್ತು. ಆದರೂ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಎರಡನೆಯವನು ನಾನು ಟ್ರೈ ಮಾಡ್ತೀನಿ ಎಂದು ಆತನೂ ಸೈಕಲ್ ಏರಿದ್ದಾನೆ. ಆದ್ರೆ ಅಷ್ಟರಲ್ಲಿ ರೈಲಿನ ವೇಗ ನಿಧಾನವಾಗಿ ರೈಲು ನಿಂತಿದೆ. ಮತ್ತೆ ರೈಲು ಚಲಿಸಲು ಆರಂಭವಾದಾಗ ಈ ಇಬ್ಬರು ಯುವಕರು, ಸುಮ್ಮನೆ ಯಾಕೆ ಬೇಕು ಇದೆಲ್ಲಾ ಅಂತ ಕೆಳಗಿಳಿದಿದ್ದಾರೆ.

ಈ ಅಪಾಯಕಾರಿ ಸಾಹಸದ ವಿಡಿಯೋ ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದು, ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಆ ವಿಡಿಯೋ ಇಲ್ಲಿದೆ ನೋಡಿ. ಆದ್ರೆ ಖಂಡಿತ ಇದನ್ನ ಪ್ರಯತ್ನಿಸಬೇಡಿ.

 

Comments

Leave a Reply

Your email address will not be published. Required fields are marked *