ನಂದಿನಿ ಹಾಲಿನ ದರ ಹೆಚ್ಚಳ- ಹಳೆಯ ಪ್ಯಾಕೆಟ್‌ಗೂ ಹೊಸ ಬೆಲೆ, ಗ್ರಾಹಕರ ಆಕ್ರೋಶ

ರಾಯಚೂರು: ಕೆಎಂಎಫ್ ನಂದಿನಿ ಹಾಲಿನ ದರ (KMF Nandini Milk Price) ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗುತ್ತಿದೆ. ಆದರೆ ರಾಯಚೂರಿನಲ್ಲಿ ಹಳೆಯ ದರದ ಪ್ಯಾಕೆಟ್‌ಗಳನ್ನ ಹೊಸ ದರದಲ್ಲಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿ 50 M.L ಹಾಲು ಇಲ್ಲದಿದ್ದರೂ ಪ್ರತಿ ಅರ್ಧ ಲೀಟರ್ ಹಾಗೂ ಒಂದು ಲೀಟರ್ ಪ್ಯಾಕೆಟ್‌ಗೆ ಹೆಚ್ಚುವರಿ 2 ರೂ. ಪಡೆಯಲಾಗುತ್ತಿದೆ. ಕೆಎಂಎಫ್ ಹೊರಡಿಸಿರುವ ಆದೇಶದಲ್ಲಿ ಜೂನ್ 26 ರಿಂದಲೇ ಹೊಸ ದರ ಅನ್ವಯವಾಗುತ್ತದೆ ಅಂತ ನಮೂದಿಸಿರುವುದರಿಂದ ಹೊಸ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ.

ಈ ಮಧ್ಯೆ ಕೆಎಂ‌ಎಫ್ ಅಧಿಕಾರಿಗಳು ಸೋಮವಾರ ರಾತ್ರಿ ಬಂದ ಹಾಲನ್ನು ಹಳೆದರಕ್ಕೆ ಮಾರಾಟ ಮಾಡಬೇಕು. ಇಂದು ಸಂಜೆ ಬರುವ ಹಾಲಿನ ಪ್ಯಾಕೆಟ್‌ ಅನ್ನ ಹೊಸ ದರಕ್ಕೆ ಮಾರಾಟ ಮಾಡಬೇಕು ಅಂತ ವ್ಯಾಪಾರಿಗಳಿಗೆ ಸೂಚಿಸಿರುವುದು ಇದೀಗ ವ್ಯಾಪಾರಿಗಳು ಹಾಗೂ ಗ್ರಾಹಕರು ಗೊಂದಲಕ್ಕೆ ಸಿಲುಕುವಂತಾಗಿದೆ.

ಒಟ್ಟಿನಲ್ಲಿ ಒಂದೆಡೆ ಬೆಲೆ ಹೆಚ್ಚಳದ ಹೊರೆಯಾದ್ರೆ ಇನ್ನೊಂದೆಡೆ ಹಳೆ ಪ್ಯಾಕೆಟ್‌ಗಳಿಗೆ ಹೊಸ ದರ ಅನ್ವಯಿಸುತ್ತಿರುವುದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಳೆದ ವರ್ಷ 3 ರೂ. ಈಗ 2 ರೂ. ಏರಿಕೆ – ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ಕೆಂಡಾಮಂಡಲ