ನೆಹರೂ ದೇಶ ವಿಭಜನೆ ಮಾಡಿದ ಉದಾರವಾದಿ, ದೇಶ ವಿಭಜನೆ ತಡೆಯಲು ಮಹಾತ್ಮಗಾಂಧಿ ಏನ್ ಮಾಡಿದ್ರು: ಸಿ.ಟಿ ರವಿ ಪ್ರಶ್ನೆ

ನವದೆಹಲಿ: ಜವಹರಲಾಲ್ ನೆಹರೂ ದೇಶ ವಿಭಜನೆ ಮಾಡಿದ ಉದಾರವಾದಿ, ಅದನ್ನು ತಡೆಯಲು ರಾಷ್ಟ್ರಪಿತ ಮಹಾತ್ಮಗಾಂಧಿ ಏನೂ ಮಾಡಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಆರ್ಯ – ದ್ರಾವಿಡ, ಆರ್‌ಎಸ್‌ಎಸ್ ಹೇಳಿಕೆ ವಿಚಾರವಾಗಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಿ ಜವಹರಲಾಲ್ ನೆಹರು ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ : ರಾಜಭವನದಲ್ಲಿ ಡಾ.ಅಂಬೇಡ್ಕರ ಪುತ್ಥಳಿ ಅನಾವರಣ – ನಾಡಿಗೆ ಸಾಮಾಜಿಕ ನ್ಯಾಯದ ಸಂದೇಶ ರವಾನಿಸಿದ ರಾಜಭವನ

Siddaramaiah

ಎರಡನೇ ಮಹಾಯುದ್ಧದ ಪರಿಣಾಮ ಬ್ರಿಟಿಷರು ಸಾಮರ್ಥ್ಯ ಕಳೆದುಕೊಂಡಿದ್ದರು. ಈ ವೇಳೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದ ದೇಶಗಳಿಗೂ ಬ್ರಿಟಿಷರು ಸ್ವಾತಂತ್ರ್ಯ ನೀಡಿದ್ದಾರೆ. ಗಾಂಧಿ ಜನಸಮೂಹ ಜೋಡಿಸಿದರು, ಕ್ರಾಂತಿಕಾರಿಗಳು ಬ್ರಿಟಿಷರ ಎದೆ ನಡುಗಿಸಿದರು. ಗಾಂಧಿ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು ಎನ್ನುವುದು ಪೂರ್ಣ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

ಭಾರತ ಸ್ವಾತಂತ್ರ್ಯವಾದ ಬಳಿಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಏನು ಸಿಕ್ತು? ದೇಶ ಇಬ್ಘಾಗವಾಯಿತು. ನೆಹರೂ – ಜಿನ್ನಾ ಸೇರಿ ದೇಶ ಒಡೆದರು, ಅದನ್ನು ನೋಡಿಕೊಂಡು ಗಾಂಧಿ ಸುಮ್ಮನೆ ಕೂತಿದ್ದರು. ದೇಶ ಒಡೆದ ಪರಿಣಾಮ ಸ್ವಾತಂತ್ರ್ಯ ಹೋರಾಟಗಾರಿಗೆ ಅತ್ಯಾಚಾರ, ಮತಾಂತರ ನೋಡುವುದು ಬಿಟ್ಟು ಬೇರೆನು ಸಿಗಲಿಲ್ಲ, ಗಾಂಧಿಯಲ್ಲೂ ದೌರ್ಬಲ್ಯಗಳು ಇದ್ದವು ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶ ಒಡೆಯುವುದನ್ನು ಅರ್ಥ ಮಾಡಿಕೊಂಡಿದ್ದ ವೀರ ಸಾರ್ವರಕರ್, ಹಿಂದೂಗಳಿಗೆ ಸೇನೆಯಲ್ಲಿ ಹೆಚ್ಚು ಸೇರಲು ಕರೆ ನೀಡಿದರು. ಒಂದು ವೇಳೆ ಸೇನೆಯಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಾಗಿದ್ದರೆ, ಇಂದು ಕಾಶ್ಮೀರ, ದೆಹಲಿ ಇರಲಿ ಭಾರತವೂ ಉಳಿಯುತ್ತಿರಲಿಲ್ಲ, ಎಲ್ಲವೂ ಒಡೆದು ಚೂರಾಗುತ್ತಿತ್ತು ಎನ್ನುವ ಮೂಲಕ ಮತ್ತೊಂದು ಹೊಸ ವಿವಾದ ಹುಟ್ಟು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *