ಜನ ಕಾಂಗ್ರೆಸ್‍ನ್ನು ವಿಪಕ್ಷ ಸ್ಥಾನದಿಂದ ಅಪಕ್ಷ ಸ್ಥಾನಕ್ಕೆ ಕಳುಹಿಸುತ್ತಾರೆ: ಸಿ.ಟಿ ರವಿ

ಪಣಜಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಗಮನಹರಿಸಿದ್ದೀರಿ ಬಿಜೆಪಿಗೆ ಅಭೂತಪೂರ್ವ ಜಯ ಸಿಕ್ಕಿದೆ. ಜನ ಕಾಂಗ್ರೆಸ್‍ನ್ನು ವಿಪಕ್ಷ ಸ್ಥಾನದಿಂದ ಅಪಕ್ಷ ಸ್ಥಾನಕ್ಕೆ ಕಳುಹಿಸಲು ಮುಂದಾಗಿದ್ದಾರೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ಗೋವಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚರಾಜ್ಯಗಳ ಫಲಿತಾಂಶದಲ್ಲಿ ಬಿಜೆಪಿಯ ಸಾಧನೆ ಸಮಾಧಾನ ತಂದಿದೆ. ಗೋವಾ ಜನತೆ ಕಾಂಗ್ರೆಸ್‍ನ್ನು ಖಾಲಿ ಕೈಯಲ್ಲಿ ಕಳುಹಿಸಿದ್ದಾರೆ. ಬಿಜೆಪಿ ಗೋವಾದಲ್ಲಿ ಸ್ಥಿರ ಸರ್ಕಾರ ನೀಡಿತ್ತು. ಗೋವಾದಲ್ಲಿನ ಅಭಿವೃದ್ಧಿ, ನರೇಂದ್ರ ಮೋದಿಯ ನಾಯಕತ್ವ ಮತ್ತು ನಮ್ಮ ಸಂಘಟಿತ ಪ್ರಯತ್ನದಿಂದ ಅಧಿಕಾರ ಬಂದಿದೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಅಂತ ಕಾಂಗ್ರೆಸ್ಸಿಗರು ಹಗಲುಗನಸು ಕಾಣ್ತಿದ್ದಾರೆ: ಬಿಎಸ್‍ವೈ

ಅಧಿಕಾರಕ್ಕಾಗಿ ಪರಿಶ್ರಮಿಸಿದ ಎಲ್ಲರಿಗೂ ಧನ್ಯವಾದ. ಜನತೆ ಒಳ್ಳೆಯ ಅಧಿಕಾರವನ್ನು ಬಯಸಿ ಮತ್ತೊಮ್ಮೆ ಬಿಜೆಪಿಗೆ ಮತ ನೀಡಿದೆ. ನಾವು ಉತ್ತಮ ಕೆಲಸ ಮಾಡಲು ಶ್ರಮಿಸುತ್ತೇವೆ. ಇದೀಗ ಗೋವಾದಲ್ಲಿ ಗೆದ್ದಿದ್ದೇವೆ. ಮುಂದಿನ ವರ್ಷ ಕರ್ನಾಟಕದ ಜನತೆಯೂ ಕಾಂಗ್ರೆಸ್‍ಗೆ ಪಾಠ ಕಲಿಸುತ್ತದೆ. ಸದ್ಯ ಗೋವಾ ಜನತೆ ಖಾಲಿ ಕೈನಲ್ಲಿ ಕಳುಹಿಸಿದೆ ಮುಂದೆ ಕರ್ನಾಟಕದ ಜನತೆ ಖಾಲಿ ಕೈನಲ್ಲಿ ಕಳುಹಿಸುತ್ತಾರೆ. ಪರಿಶ್ರಮದಿಂದ ಕೆಲಸ ಮಾಡಿದರೆ ಗೆಲುವು ಸಿಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ. 4 ರಾಜ್ಯದಲ್ಲಿ ಅಧಿಕಾರ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೂಢನಂಬಿಕೆಯನ್ನು ಸುಳ್ಳು ಮಾಡಿದ ಯೋಗಿ – ನೋಯ್ಡಾಗೆ ಭೇಟಿ ನೀಡಿದ್ರೂ ಗೆಲುವು!

Comments

Leave a Reply

Your email address will not be published. Required fields are marked *