ದುರ್ಬಲ ಇರೋ ಕಡೆ ಬದಲಾವಣೆ ಮಾಡಲಾಗುತ್ತೆ: ಸಿ.ಟಿ.ರವಿ

CT Ravi

ಮಂಡ್ಯ: ಸಾಮರ್ಥ್ಯ ಇದ್ದವರು ಎಲ್ಲಿದ್ದರು ಯಶಸ್ಸು ಕಾಣುತ್ತಾರೆ. ದುರ್ಬಲ ಇರೋ ಕಡೆ ಬದಲಾವಣೆ ಆಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸಿದ್ದೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆ ವಿಚಾರವಾಗಿ ನಗರದ ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಅವರು ಯಾವ ಉದ್ದೇಶದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಗೆಲ್ಲುವ ಸಾಧ್ಯತೆ ಇರುವರಿಗೆ ಪಕ್ಷ ಬೆಂಬಲ ಕೊಡುತ್ತೆ. ದುರ್ಬಲ ಇರೋ ಕಡೆ ಬದಲಾವಣೆ ಮಾಡಲಾಗುತ್ತೆ. ಇದು ಹಿಂದಿನಿಂದ ಬಂದಿರುವ ಪದ್ದತಿ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕಾರಣ ಬ್ಯುಸಿನೆಸ್ ಅಲ್ಲ, ಅಪ್ಪ ಮಕ್ಕಳ ಸಂಸ್ಕೃತಿ ರಾಜಕಾರಣದಲ್ಲಿ ಇರಬಾರದು: ಅಶ್ವಥ್ ನಾರಾಯಣ

ಗೆಲ್ಲುವ ಸಾಮರ್ಥ್ಯ ಇರುವವರಿಗೆ ನಮ್ಮ ಪಾರ್ಟಿ ಬೆಂಬಲ ಕೊಡುತ್ತಲೇ ಬಂದಿದೆ. ಸಾಮರ್ಥ್ಯ ಇದ್ದವರು ಎಲ್ಲಿದ್ದರೂ ಯಶಸ್ಸು ಕಾಣುತ್ತಾರೆ. ನಮ್ಮ ಪಕ್ಷ ದುರ್ಬಲರಿಗೆ ಮಣೆ ಹಾಕುವುದಿಲ್ಲ. ಕರ್ನಾಟಕಕ್ಕೆ ಕರ್ನಾಟಕದವರೇ ಮಾದರಿ. ಇಲ್ಲಿ ಗುಜರಾತ್, ಪಂಜಾಬ್ ಮಾದರಿ ಅನ್ನುವುದು ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

Comments

Leave a Reply

Your email address will not be published. Required fields are marked *