ಸಿಟಿ ರವಿ ಅಲ್ಲ ಲೂಟಿ ರವಿ, ಡಿಕೆ ಅಲ್ಲ ಕೆಡಿ – ಪರಸ್ಪರ ವಾಗ್ದಾಳಿ ನಡೆಸಿದ ನಾಯಕರು

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಡಿ.ಕೆ ಅಲ್ಲ ಕೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ಕೊಟ್ಟಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಲೂಟಿ, ಲ್ಯಾಂಡ್ ಗ್ರಾಬ್ ಮಾಡಿದ ಬಗ್ಗೆ ಯಾವ ಠಾಣೆಯಲ್ಲೂ ದೂರು ದಾಖಲಾಗಿಲ್ಲ. ನನ್ನ ಬಗ್ಗೆ ಅವರು ಗೌರವದಿಂದಲೇ ಮಾತನಾಡಬೇಕು. ಸಭ್ಯತೆ ಮೀರಿದರೆ ಅವರನ್ನು ನಾನೂ ಡಿಕೆ ಅಲ್ಲ ಕೇಡಿ ಎನ್ನಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲಿ ಹೊಂಚು ಹಾಕಿ ಬೇಟೆಯಾಡಿದ ಚಿರತೆ – ವೀಡಿಯೋ ವೈರಲ್

40% ಸರ್ಕಾರ ಎಂದು ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಗೆ ಬಗ್ಗೆ ನಾನು ನೀಡಿದ ಪ್ರತಿಕ್ರಿಯೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನನ್ನನ್ನು ಲೂಟಿ ರವಿ ಎಂದಿದ್ದಾರೆ. ಆದರೆ ನನ್ನ ಮೇಲೆ ED, IT ದಾಳಿಗಳು ಆಗಿಲ್ಲ. ನನ್ನ ವಿರುದ್ಧ ಯಾವುದೇ ಚಾರ್ಜ್ ಶೀಟ್ ಹಾಕಲಾಗಿಲ್ಲ. ನಾನು ಮೊದಲ ಬಾರಿಗೆ ಶಾಸಕನಾದಾಗ ಎಷ್ಟು ಆಸ್ತಿ ಇತ್ತೋ, ಈಗಲೂ ಅಷ್ಟೇ ಇದೆ. ನಿಮ್ಮ ಹೆಸರನ್ನು ಉಲ್ಟಾ ಹೇಳಿ, ಕೇಡಿ ಅಂತ ನಾನು ಹೇಳಲ್ಲ. ನಾನು ಒಂದು ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ನಾನು ಯಾವುದೇ ಬಕೆಟ್ ಹಿಡಿದು ಈ ಹುದ್ದೆಗೆ ಬರಲಿಲ್ಲ, ಮೈಕ್ ಹಿಡಿದು, ಪೋಸ್ಟರ್ ಹಂಚಿದ್ದೇನೆ. ಹೋರಾಟದ ಹಿನ್ನೆಲೆ ಇಂದ ಬಂದಿದ್ದೇನೆ. ಯಾರ ಸಾರ್ವಜನಿಕ ಜೀವನದ ಬಗ್ಗೆ ಹೇಳುವ ಮುನ್ನ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೋಡಿಕೊಳ್ಳಿ ಎಂದು ಸಿಟಿ ರವಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವ ಯತ್ನ ಮಾಡಬೇಡಿ. ನಾನು ಗಾಜಿನ ಮನೆಯಲ್ಲಿಲ್ಲ. ನನ್ನ ಬಗ್ಗೆ ಹೇಳಿಕೆ ನೀಡುವ ಮೊದಲು ಯೋಚನೆ ಮಾಡಿ. ಡಿಕೆಶಿ ಶಾಸಕರಾದಾಗ ಅವರ ಬಳಿ ಇದ್ದ ಆಸ್ತಿ ಎಷ್ಟು? ಈಗ ಅವರ ಆಸ್ತಿ ಎಷ್ಟು ಪಟ್ಟು ಹೆಚ್ಚಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಡಿಕೆಶಿ ಸಭ್ಯತೆಯಿಂದ ವರ್ತಿಸುಬೇಕು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪವರ್ ಸ್ಟಾರ್ ಹೆಸರಲ್ಲಿ ಮಿನಿ ಸ್ಮಾರಕ ನಿರ್ಮಿಸಿದ ಹೊಸೂರು ಗ್ರಾಮಸ್ಥರು

Comments

Leave a Reply

Your email address will not be published. Required fields are marked *