ಚಿಕ್ಕಮಗಳೂರಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ ಸಿ.ಟಿ.ರವಿ

– ಹಾಸನ ಜಿಲ್ಲಾಧಿಕಾರಿ ಸಕ್ರ್ಯೂಲರ್ ಹಿಂಪಡೆದು ಕ್ಷಮೆ ಕೇಳುವಂತೆ ಆಗ್ರಹ

ಚಿಕ್ಕಮಗಳೂರು: ದತ್ತಮಾಲಾಧಾರಿಗಳನ್ನ ಕುಡುಕರಂತೆ ಬಿಂಬಿಸಿದ ಹಾಸನ ಜಿಲ್ಲಾಧಿಕಾರಿ ವಿರುದ್ಧ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕಿಡಿಕಾರಿದ್ದು, ಕೂಡಲೇ ಹಾಸನ ಜಿಲ್ಲಾಧಿಕಾರಿ ಸಕ್ರ್ಯೂಲರ್ ಹಿಂಪಡೆದು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ದತ್ತಜಯಂತಿ ಅಂಗವಾಗಿ ಮಾಲಾಧಾರಿಯಾಗಿರುವ ಸಿ.ಟಿ.ರವಿ ಅವರು ಇಂದು ನಗರದ ನಾರಾಯಣಪುರದಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ ಮಾಡಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಾಸನ ಡಿಸಿ ದತ್ತಮಾಲಾಧಾರಿಗಳ ಬಗ್ಗೆ ಬಳಸಿರುವ ಭಾಷೆ ಗೌರವ ತರುವಂತದ್ದಲ್ಲ. ಅದನ್ನ ನಾನು ಖಂಡಿಸುತ್ತೇನೆ. ಕೂಡಲೇ ಅವರು ತಮ್ಮ ಸಕ್ರ್ಯೂಲರ್ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಆದೇಶದಲ್ಲಿ ಅವರು ದತ್ತಮಾಲಾಧಾರಿಗಳಿಗೆ ಅವಹೇಳನ, ಅಪಮಾಣ ಮಾಡುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಸನಾತನ ಧರ್ಮದ ಪರಂಪರೆಯಲ್ಲಿ ದತ್ತಾತ್ರೇಯ ಪರಂಪರೆಯನ್ನ ಅತ್ಯಂತ ಮೂಲ ಹಾಗೂ ಶ್ರೇಷ್ಠವಾದದ್ದು. ಬ್ರಹ್ಮ-ವಿಷ್ಣು-ಮಹೇಶ್ವರರ ಅವಿರ್ಭಾವವಾಗಿರುವಂತಹಾ ರೂಪವೇ ದತ್ತಾತ್ರೇಯರು. ಅದನ್ನ ಅವಧೂತ ಪರಂಪರೆ ಅಂತ ಕೂಡ ಸನಾತನ ಪರಂಪರೆ ಗುರುತಿಸುತ್ತದೆ. ಅವಧೂತ ಪರಂಪರೆ ಭಿಕ್ಷಾಟನೆಯಿಂದ ಜೀವನ ಮಾಡುತ್ತ ಮಹಾತಪಸ್ವಿಗಳಾಗಿ, ಜ್ಞಾನಿಗಳಾಗಿ ಇಡೀ ಸಮಾಜಕ್ಕೆ ಮಾರ್ಗದರ್ಶನ ಮಾಡುವ ವೈರಾಗ್ಯ ಪರಂಪರೆಯಾಗಿದೆ ಎಂದಿದ್ದಾರೆ.

ದತ್ತಾತ್ರೇಯ ಕ್ಷೇತ್ರ ತಾಲೂಕಿನ ಪುರಾಣ ಪ್ರಸಿದ್ಧವಾಗಿರುವ ಚಂದ್ರದ್ರೋಣ ಪರ್ವತಗಳ ತಪ್ಪಲಿನಲ್ಲಿದೆ. ಪ್ರತಿವರ್ಷದಿಂದ ಈ ವರ್ಷವು ದತ್ತಮಾಲಾದಾರಣೆ ಮಾಡಿ ದತ್ತಾತ್ತೇಯ ಜಯಂತಿ ಮುನ್ನ ದಿನ ಐದು ಮನೆಗಳಲ್ಲಿ ಭಿಕ್ಷಾಟನೆ ಮಾಡಿ ಇರುಮುಡಿ ಕಟ್ಟಿ ನಾಳೆ ಇರುಮುಡಿ ಹೊತ್ತು ದತ್ತಾತ್ರೇಯ ಕ್ಷೇತ್ರಕ್ಕೆ ತೆರಳಿ ದತ್ತಪಾದುಕೆ ದರ್ಶನಪಡೆದು, ಪೂಜಾ-ಕೈಂಕರ್ಯದಲ್ಲಿ ಪಾಲ್ಗೊಂಡು ವಾಪಸ್ ಬಂದು ಮಾಲೆ ವಿಸರ್ಜನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *