ಗುಬ್ಬಿ ಮೇಲೆ ಬ್ರಹ್ಮಾಸ್ತ್ರ- ಖಾನಾಪುರ ಸಿಪಿಐ ಸಸ್ಪೆಂಡ್‌

– ಠಾಣೆಗೆ ಬಿಜೆಪಿ ನಾಯಕರ ಪ್ರವೇಶಕ್ಕೆ ಅನುಮತಿ ನೀಡಿದ್ದಕ್ಕೆ ಶಿಕ್ಷೆ

ಬೆಳಗಾವಿ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಸಿಟಿ ರವಿ ವರ್ಸಸ್‌ ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರಕರಣದಲ್ಲಿ ಖಾನಾಪುರ (Khanapura) ಸಿಪಿಐ ಅವರನ್ನು ಸರ್ಕಾರ ಅಮಾನತು ಮಾಡಿದೆ.

ಹೌದು. ಸಿಟಿ ರವಿ (CT Ravi) ಅವರನ್ನು ರಾತ್ರಿಯಿಡಿ ಪೊಲೀಸರು ಸುತ್ತಾಡಿಸಿದ್ದಕ್ಕೆ ಬಿಜೆಪಿ, ಜೆಡಿಎಸ್‌ (BJP, JDS) ಆಕ್ರೋಶ ವ್ಯಕ್ತಪಡಿಸಿತ್ತು. ಇಲಾಖೆಯ ಕಾರ್ಯವೈಖರಿ ಬಗ್ಗೆ ಟೀಕೆ ಹೆಚ್ಚಾಗುತ್ತಿದ್ದಂತೆ ಈಗ ಖಾನಾಪುರ ಇನ್ಸ್ ಪೆಕ್ಟರ್ ಮಂಜುನಾಥ ನಾಯಕ್‌ (Manjunath Nayak) ಅವರನ್ನು ಅಮಾನತು ಮಾಡಿದೆ.  ಇದನ್ನೂ ಓದಿ: 6 ಜನರನ್ನು ಮದುವೆಯಾಗಿ ಹಣ, ಚಿನ್ನ ಕಳ್ಳತನ – 7ನೇ ಮ್ಯಾರೇಜ್‌ಗೆ ರೆಡಿಯಾಗಿದ್ದ ಲೇಡಿ ಅರೆಸ್ಟ್‌!

ಅಸಲಿಗೆ ಖಾನಾಪುರ ಇನ್ಸ್‌ಪೆಕ್ಟರ್‌ ಮತ್ತು ಸಿಟಿ ರವಿಗೂ ಸಂಬಂಧವೇ ಇಲ್ಲ. ರವಿ ಅವರನ್ನು ಕಮಿಷನರೇಟ್ ಪೊಲೀಸರು ಪೊಲೀಸ್ ಠಾಣೆಗೆ ಕರೆತಂದದ್ದರು. ಖುದ್ದು ಬೆಳಗಾವಿ ಕಮಿಷನರ್, ಡಿಸಿಪಿಯೊಂದಿಗೆ ಸಿ ಟಿ ರವಿ ಬಂದಿದ್ದರು. ಕಮಿಷನರ್ ತಂದ ಆರೋಪಿಗೆ ಖಾನಾಪುರ ಇನ್ಸ್‌ಪೆಕ್ಟರ್‌ ಆಶ್ರಯ ನೀಡಿದ್ದರು. ಆಶ್ರಯ ಕೊಟ್ಟ ತಪ್ಪಿಗೆ ಅಮಾನತು ಶಿಕ್ಷೆಯೇ? ಈ ಮೂಲಕ ಕಿರಿಯ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳ ಸವಾರಿ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

 

ಖಾನಾಪುರ ಠಾಣೆಯಲ್ಲಿ ಸಿಟಿ ರವಿ ಇರು ವಿಷಯವನ್ನು ತಿಳಿದು ಅಶೋಕ್‌ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಶೋಕ್‌ ಪ್ರವೇಶವನ್ನು ಪೊಲೀಸರು ತಡೆದಿದ್ದರು. ಆಗ ಪ್ರತಿಪಕ್ಷ ನಾಯಕರನ್ನು ಒಳಗೆ ಬಿಡದಿದ್ರೆ ಹೇಗೆ? ನಿಮ್ಮ ಮೇಲೆಯೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಹಿರಿಯ ಅಧಿಕಾರಿಗಳ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಅಶೋಕ್‌ ಸೇರಿದಂತೆ ಬಿಜೆಪಿ ನಾಯಕರನ್ನು ಸಿಪಿಐ ಮಂಜುನಾಥ್ ನಾಯಕ್ ಒಳಗಡೆ ಬಿಟ್ಟಿದ್ದರು.

ಖಾನಾಪುರ ಠಾಣೆಯಲ್ಲಿ ಹಿರಿಯ ಅಧಿಕಾರಿಗಳು ಇದ್ದರು. ನಮ್ಮನ್ನ ಒಳಗೆ ಬಿಟ್ಟು ಹೊರಗೆ ಹೋಗಿದ್ದರು. ಪೊಲೀಸ್‌ ಅಧಿಕಾರಿಗಳು ಅವರೊಳಗೆ ಮಾತನಾಡುತ್ತಿದ್ದರು. ನಾವು ಒಳಗೆ ಮಾತನಾಡುತ್ತಿದ್ದೆವು ಎಂದು ಸಿಟಿ ರವಿ ಹೇಳಿದ್ದರು.

 

ಸರ್ಕಾರಕ್ಕೆ ಪಬ್ಲಿಕ್‌ ಪ್ರಶ್ನೆ
1. ಠಾಣೆಯೊಳಗೆ ಸಿ ಟಿ ರವಿ ಜತೆ ಬಿಜೆಪಿ ನಾಯಕರ ಭೇಟಿಗೆ ಅವಕಾಶ ಕೊಟ್ಟಿದ್ದು ತಪ್ಪೇ?
2. ಬಿಜೆಪಿ ನಾಯಕರನ್ನು ಒಳಗಡೆ ಬಿಟ್ಟು ಮಾತನಾಡಲು ಅವಕಾಶ ಕೊಟ್ಟಿದ್ದು ಯಾವ ಶ್ರೇಣಿಯ ಅಧಿಕಾರಿ?
3. ಹಿರಿಯ ಪೊಲೀಸ್ ಅಧಿಕಾರಿಗಳದ್ದೂ ತಪ್ಪಿದ್ದರೂ ಅವರ ಮೇಲೆ ಯಾಕಿಲ್ಲ?
4. ಹಿರಿಯ ಅಧಿಕಾರಿಗಳ ಆದೇಶ ಇಲ್ಲದೇ ಖಾನಾಪುರ ಸಿಪಿಐ ಹಾಗೆ ನಡೆದುಕೊಳ್ಳಲು ಸಾಧ್ಯವೇ?