ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ

ಮಾಸ್ಕೋ: ರಷ್ಯಾ ಉಕ್ರೇನ್ ನಡುವೆ ಶಾಂತಿ ಮಾತುಕತೆ ನಡೆಯುವುದು ಅಮಾನಾಸ್ಪದವಾಗಿದೆ. ಉಕ್ರೇನ್ ಉಪಪ್ರಧಾನಿ ಉಕ್ರೇನ್ ನಗರಗಳನ್ನು ಯಾವುದೇ ಕಾರಣಕ್ಕೂ ರಷ್ಯಾಕ್ಕೆ ಶರಣಾಗಿಸುವುದಿಲ್ಲ ಎಂದು ಹೇಳಿಕೆ ನೀಡಿರುವುದು ಯುದ್ಧವನ್ನು ಮುಂದುವರಿಸಲು ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಈ ನಡುವೆ ಇಂದು (ಸೋಮವಾರ) ಕಚ್ಚಾತೈಲ ಬೆಲೆ ಶೇ.3ರಷ್ಟು ಏರಿಕೆಯಾಗಿದೆ. ಒಂದು ಬ್ಯಾರಲ್‌ಗೆ 111 ಡಾಲರ್ (8,444.11 ರೂ.) ಗಳಿಗೆ ಏರಿಕೆಯಾಗಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ ಬ್ಯಾರಲ್‌ಗೆ 107.93 ಡಾಲರ್‌ಗಳಿಗೆ (8,207.57 ರೂ.) ಮಾರಾಟವಾಗುತ್ತಿದ್ದ ಕಚ್ಚಾತೈಲ ಬ್ರೆಂಟ್ ಕಚ್ಚಾತೈಲ ಒಪ್ಪಂದದ ಪ್ರಕಾರ ಕೊನೆಯ ವಹಿವಾಟಿನಲ್ಲಿ ಪ್ರತಿ ಬ್ಯಾರಲ್‌ಗೆ 111 ಡಾಲರ್‌ನಂತೆ ಮಾರಾಟವಾಗಿದೆ. ಇದರಿಂದ ಒಟ್ಟಾರೆ ಕಚ್ಚಾತೈಲ ಸರಬರಾಜಿನಲ್ಲಿ ಶೇ.2.8ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಉಬರ್ ಚಾಲಕರಾದ ಅಫ್ಘಾನ್ ಮಾಜಿ ಹಣಕಾಸು ಸಚಿವ

ಭಾರತಕ್ಕೆ ಹೊರೆಯಾಗುವುದೇ?
ಭಾರತಕ್ಕೆ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ರಷ್ಯಾದ ತೈಲ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಸರ್ಕಾರದ ಮಟ್ಟದಲ್ಲಿ ನಡೆದ ಒಪ್ಪಂದವಲ್ಲ, ತೈಲ ಕಂಪನಿಗಳ ನಡುವೆ ಮಾಡಿಕೊಂಡಿರುವ ಒಪ್ಪಂದ ಆಗಿದೆ ಎಂದು ಹೇಳಲಾಗಿತ್ತು. ಆದರೀಗ ಸತತವಾಗಿ ತೈಲದರ ಏರಿಕೆಯಾಗುತ್ತಿರುವುದು ಮತ್ತು ರಷ್ಯಾದ ತೈಲ ಮಾರುಕಟ್ಟಯಿಂದ ಹೊರಗುಳಿಯಲಿದೆ ಎನ್ನುವ ಸಂಶಯ ವ್ಯಕ್ತವಾಗಿರುವುದು ಭಾರತಕ್ಕೆ ಹೊರೆಯಾಗಲಿದೆಯೇ ಎನ್ನುವ ಆತಂಕ ಉಂಟುಮಾಡಿದೆ. ಇದನ್ನೂ ಓದಿ: 133 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ

Comments

Leave a Reply

Your email address will not be published. Required fields are marked *