ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿದ್ರೋ ಹಾಗೆಯೇ ಅವ್ರನ್ನು ಕೊಂದು ಬಿಡಿ ಪ್ಲೀಸ್ – ಗುರು ಪತ್ನಿ ಮನವಿ

ಮಂಡ್ಯ: ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿ ಕೊಂದರೋ ಹಾಗೇ ಅವರನ್ನು ಬ್ಲಾಸ್ಟ್ ಮಾಡಬೇಕು. ಯಾವುದೇ ಕಾರಣಕ್ಕೆ ಅವರನ್ನು ಬಿಡಬಾರದು. ಪ್ಲೀಸ್ ಇದಕ್ಕೆ ಎಲ್ಲರೂ ಸಹಾಯ ಮಾಡಿ ಎಂದು ಯೋಧ ಗುರುವಿನ ಪತ್ನಿ ಕಲಾವತಿ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಲಾವತಿ ಅವರು, ಹುಷಾರು. ನಾನು ಏಪ್ರಿಲ್‍ಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೂ ನಾವು ಅವರು ಡ್ಯೂಟಿಗೆ ಹೋದಾಗೆಲ್ಲಾ ಹುಷಾರು, ಹುಷಾರು ಎಂದು ಹೇಳುತ್ತಿದ್ದೆವು. ಅನೇಕ ಬಾರಿ ನಾನು ಈ ಕೆಲಸವನ್ನು ಬಿಟ್ಟುಬಿಡಿ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಇಂದು ಈ ಸುದ್ದಿ ತಂದುಕೊಡುವುದಕ್ಕೆ ಬಿಡಲಿಲ್ಲ ಅನ್ನಿಸುತ್ತದೆ ಎಂದು ಕಣ್ಣೀರು ಹಾಕಿಕೊಂಡು ಹೇಳಿದ್ದಾರೆ. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

ನಾನು ಇನ್ನೂ ಹತ್ತು ವರ್ಷ ಸೇವೆ ಸಲ್ಲಿಸದೇ ಕೆಲಸ ಬಿಡುವುದಿಲ್ಲ ಎಂದಿದ್ದರು. ಮದುವೆಯಾಗಿ ವರ್ಷವಾಗಿಲ್ಲ, ಜೀವನದಲ್ಲಿ ಅವರಿಗೆ ನೆಮ್ಮದಿ ಅನ್ನುವುದು ಸಿಗಲಿಲ್ಲ. ದೇಶ ಕಾಯುವವರನ್ನೇ ಸಾಯಿಸಿದ್ದಾರೆ. ಅವರು ಏನು ಮಾಡಿದ್ದರು? ಇದರಿಂದ ಅವರಿಗೆ ಏನು ಸಿಕ್ಕಿತು? ಎಂದು ಆಕ್ರೋಶದಿಂದ ದುಷ್ಟರಿಗೆ ಕಲಾವತಿ ಅವರು ಪ್ರಶ್ನೆ ಮಾಡಿದ್ದಾರೆ.

ದೇಶದ ಜನರನ್ನು ರಕ್ಷಣೆ ಮಾಡಲು ಹೋಗುತ್ತಿದ್ದವರನ್ನೇ ಕೊಲೆ ಮಾಡಿದ್ದಾರೆ. ಅವರು ಹೇಗೆ ಸತ್ತರೋ, ಹಾಗೇ ದುಷ್ಟರು ಸಾಯಬೇಕು. ಈ ಬಗ್ಗೆ ಎಲ್ಲರಿಗೂ ಗೊತ್ತಾಗಲಿ, ಪ್ಲೀಸ್ ಎಲ್ಲರೂ ಸಹಾಯ ಮಾಡಿ ಪ್ಲೀಸ್, ಅವರ ರೀತಿಯಲ್ಲೇ ಬ್ಲಾಸ್ಟ್ ಮಾಡಿ ದುಷ್ಟರನ್ನು ಸಾಯಿಸಬೇಕು. ನನ್ನ ಗಂಡನನ್ನು ಕೊಂದವರನ್ನು ಸುಮ್ಮನೆ ಬಿಡಬಾರದು. ದಯವಿಟ್ಟು ಅವರನ್ನು ಬಿಡಬೇಡಿ ಎಂದು ಕಣ್ಣೀರು ಹಾಕುತ್ತಾ ಕಲಾವತಿ ಅವರು ಮನವಿ ಮಾಡಿಕೊಂಡಿದ್ದಾರೆ.

https://www.youtube.com/watch?v=wv03LJifMzo

https://www.youtube.com/watch?v=sgF9rfJIWks

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *