ರಾಷ್ಟ್ರಪತಿ ಚುನಾವಣೆ ಮತ ಎಣಿಕೆ: ಗುಜರಾತ್ ನಲ್ಲಿ ಕೈಗೆ ಶಾಕ್

ನವದೆಹಲಿ: ರಾಷ್ಟ್ರಪತಿ ಚುನಾವಣೆ ವೇಳೆ ಗುಜರಾತ್ ಕಾಂಗ್ರೆಸ್ಸಿನ 8 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ.

ಗುಜರಾತ್ ನಲ್ಲಿ ರಾಮನಾಥ್ ಕೋವಿಂದ್ ಪರ 132 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ ಬೆಂಬಲಿತ ಮೀರಾ ಕುಮಾರ್ ಪರ 49 ಮತಗಳು ಬಿದ್ದಿದೆ.

57 ಮಂದಿ ಕಾಂಗ್ರೆಸ್ ಮತಗಳ ಪೈಕಿ 49 ಮತಗಳು ಮೀರಾ ಕುಮಾರ್ ಅವರಿಗೆ ಬಿದ್ದಿದ್ದು, 8 ಮಂದಿ ಶಾಸಕರು ರಾಮನಾಥ್ ಕೋವಿಂದ್ ಪರವಾಗಿ ಮತವನ್ನು ಚಲಾಯಿಸಿದ್ದಾರೆ.

ಈ ವರ್ಷವೇ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ 8 ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದು, ಕಾಂಗ್ರೆಸ್ ಭಾರೀ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ.

 

 

https://twitter.com/tombstonerip/status/887971735714377728

Comments

Leave a Reply

Your email address will not be published. Required fields are marked *