ಮಧ್ಯಪ್ರದೇಶ ಚುನಾವಣಾ ಫಲಿತಾಂಶ ತಡವಾಗುತ್ತಿರುವುದು ಯಾಕೆ?

ಭೋಪಾಲ್: ಮಧ್ಯಪ್ರದೇಶ ಚುನಾವಣೆಯ ಸಂಪೂರ್ಣ ಫಲಿತಾಂಶ ಸಂಜೆಯ ವೇಳೆಗೆ ಪ್ರಕಟವಾಗುವ ಸಾಧ್ಯತೆಯಿದೆ.

ಪ್ರತಿ ಸುತ್ತಿನ ಮತ ಎಣಿಕೆಯ ಬಳಿಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅಲ್ಪ ಅಂತರ ಇರುವ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ಏಜೆಂಟ್ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ.

ಆಕ್ಷೇಪಣೆ ಸಲ್ಲಿಕೆಯಾಗದೇ ಇದ್ದರೆ ನಂತರದ ಸುತ್ತು ಎಣಿಕೆಯಾಗುತ್ತದೆ. ಒಂದು ವೇಳೆ ಆಕ್ಷೇಪಣೆ ಸಲ್ಲಿಕೆಯಾದರೆ ಮತ್ತೆ ಎಣಿಕೆ ಮಾಡಲಾಗುತ್ತದೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಕಾಂಗ್ರೆಸ್, ಬಿಜೆಪಿ ಮಧ್ಯೆ 23 ಕ್ಷೇತ್ರಗಳಲ್ಲಿ 500 ಮತಗಳ ಅಂತರವಿದ್ದರೆ, 92 ಕ್ಷೇತ್ರಗಳಲ್ಲಿ 2 ಸಾವಿರ ಮತಗಳ ಅಂತರವಿದೆ. ಹೀಗಾಗಿ ಪ್ರತಿಬಾರಿಯೂ ಆಕ್ಷೇಪಣೆ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮತ ಎಣಿಕೆಯ ಅಧಿಕಾರಿಗಳು ಮರು ಎಣಿಕೆ ಮಾಡುತ್ತಿದ್ದಾರೆ.

ನಿಯಮ ಬದಲಾವಣೆ
ಈ ಹಿಂದೆ ಎಲ್ಲ ಸುತ್ತುಗಳು ಮುಗಿದ ಮೇಲೆ ಪಕ್ಷಗಳ ಎಜೆಂಟ್‍ಗಳ ಸಹಿ ಹಾಕಿ ಫಲಿತಾಂಶ ಪ್ರಕಟವಾಗುತಿತ್ತು. ಆದರೆ ಈ ಬಾರಿ ಇವಿಎಂ ವಿಚಾರದಲ್ಲಿ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪ್ರತಿ ಸುತ್ತಿನ ಎಣಿಕೆಯಾದ ಬಳಿಕ ಏಜೆಂಟ್ ಗಳ ಸಹಿ ತೆಗೆದುಕೊಳ್ಳುವಂತೆ ನಿಯಮವನ್ನು ಬದಲಾಯಿಸಿತ್ತು.

https://www.youtube.com/watch?v=G9bvY4FfCqI

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *