ದೇವಸ್ಥಾನದೊಳಗೆ ನುಗ್ಗಿದ ಮೊಸಳೆಗೆ ಜನರಿಂದ ಪೂಜೆ

ಗಾಂಧಿನಗರ: ದೇವಸ್ಥಾನಕ್ಕೆ ನುಗ್ಗಿದ ಮೊಸಳೆಗೆ ಗ್ರಾಮಸ್ಥರು ಪೂಜೆ ಮಾಡಿದ ಘಟನೆ ಗುಜರಾತ್‍ನ ಕೊಡಿಯಾರ್ ಮಾತಾ ದೇವಾಲಯದಲ್ಲಿ ನಡೆದಿದೆ. ಅಲ್ಲದೆ ಇದು ಶುಭ ಎಂದು ಹೇಳುವ ಮೂಲಕ ಅರಣ್ಯ ಇಲಾಖೆಯ ಕಾರ್ಯಾಚರಣೆಯನ್ನು ವಿಳಂಬಗೊಳಿಸಿದ್ದಾರೆ.

ರಾಜ್ಯದಲ್ಲಿರುವ ಪಟೇಲ್ ಸಮುದಾಯದರು ಮೊಸಳೆ ಮೇಲೆ ನಿಂತಿರುವ ಕೊಡಿಯಾರ್ ಮಾತೆಯನ್ನು ದೇವತೆಯಾಗಿ ಪೂಜಿಸುತ್ತಾರೆ. ಹೀಗಾಗಿ ಜನರು ಮೊಸಳೆಯನ್ನು ನೋಡುತ್ತಿದ್ದಂತೆ ಪ್ರಾರ್ಥನೆ ಮಾಡಿದ್ದಾರೆ.

6 ಅಡಿ ಮೊಸಳೆ ದೇವತೆಯ ವಿಗ್ರಹದ ಬಳಿ ಇದ್ದ ಕಾರಣ ಅದಕ್ಕೆ ಆರತಿ ಬೆಳಗಿ ಕುಂಕುಮ ಸಿಂಪಡಿಸಿದ್ದಾರೆ ಎಂದು ಲನ್ವಾದಾ ಅರಣ್ಯ ಇಲಾಖೆ ಅಧಿಕಾರಿ ಆರ್.ವಿ ಪಟೇಲ್ ಹೇಳಿದ್ದಾರೆ. ಇದನ್ನೂ ಓದಿ: ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪ್ರವಚನದ ವೇಳೆ ಮೊಸಳೆ ಪ್ರತ್ಯಕ್ಷ

ಮೊಸಳೆಯನ್ನು ರಕ್ಷಿಸಲು ಮುಂದಾದಾಗ ಗ್ರಾಮಸ್ಥರು 2 ಗಂಟೆಗಳ ಕಾಲ ತಡ ಮಾಡಿದ್ದಾರೆ. ಅಲ್ಲದೆ ನಮ್ಮ ಸಿಬ್ಬಂದಿ ಮೊಸಳೆಯನ್ನು ಹಿಡಿಯಲು ಹೋದಾಗ ಗ್ರಾಮಸ್ಥರು ಅದಕ್ಕೆ ನಿರಾಕರಿಸಿದ್ದರು. ಬಳಿಕ ಜನರಲ್ಲಿ ಇದ್ದ ಧಾರ್ಮಿಕ ಭಾವನೆಯನ್ನು ನೋಯಿಸಲು ಇಷ್ಟವಿರಲಿಲ್ಲ. ಹಾಗಾಗಿ ಸ್ವಲ್ಪ ಹೊತ್ತು ಕಾದು ನಿಂತು ನಂತರ ಮೊಸಳೆಯನ್ನು ರಕ್ಷಿಸಿ ಕೆರೆಗೆ ಬಿಟ್ಟೇವು ಎಂದು ಆರ್.ಎಂ ಪಾರಮಾರ್ ತಿಳಿಸಿದ್ದಾರೆ.

ಮಹಿಸಾಗರ ನದಿಯಲ್ಲಿ ಸಾಕಷ್ಟು ಮೊಸಳೆಗಳಿದೆ. ಅದು ತಮ್ಮ ಆಹಾರವನ್ನು ಹುಡುಕುತ್ತಾ 4-5 ಕಿ.ಮೀ ಬರುತ್ತದೆ. ಈ ಮೊಸಳೆಗೆ 4 ವರ್ಷವಾಗಿದ್ದು, ಶನಿವಾರ ರಾತ್ರಿ ದೇವಸ್ಥಾನಕ್ಕೆ ನುಗ್ಗಿರಬಹುದು. ನಾವು ಪ್ರತಿ ವರ್ಷ 30ರಿಂದ 35 ಮೊಸಳೆಯನ್ನು ರಕ್ಷಿಸಿದ್ದೇವೆ ಎಂದು ಪಾರಮಾರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *