ಮುಸ್ಲಿಮರ ಮನೆ, ಬದುಕು ಕಸಿಯಲು ಬಿಜೆಪಿ ನಾಯಕರಲ್ಲೇ ಪೈಪೋಟಿ: ಮುಫ್ತಿ

Mehbooba Mufti

ಶ್ರೀನಗರ: ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ರಾಮನವಮಿ ವೇಳೆ ನಡೆದ ಹಿಂಸಾಚಾರ ಖಂಡಿಸಿ ಬಿಜೆಪಿ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಸಂವಿಧಾನವನ್ನು ನಾಶಪಡಿಸುವ ಬಿಜೆಪಿಯವರ ಪ್ರತಿಕಾರವು ಈಗ ಅಲ್ಪಸಂಖ್ಯಾತರ ಮನೆಗಳನ್ನು ತಲುಪಿದೆ. ಬಿಜೆಪಿ ನಾಯಕರು ಮುಸ್ಲಿಮರ ಮನೆ, ಬದುಕು ಮತ್ತು ಘನತೆ ಎಲ್ಲವನ್ನೂ ಕಸಿದುಕೊಳ್ಳುವಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದಾರೆ ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ?

ಕಾಶ್ಮೀರಿ ಪಂಡಿತರು ವಲಸೆ ಹೋಗಲು ಒತ್ತಾಯಿಸಿದಾಗ ಕಾಶ್ಮೀರಿ ಮುಸ್ಲಿಮರಾದ ನಾವು ಮೂಕ ಪ್ರೇಕ್ಷಕರಾಗಿದ್ದೆವು ಎಂದು ಆರೋಪಿಸಲಾಗಿತ್ತು. ಭಾರತದ ಕಲ್ಪನೆಯನ್ನು ಬಿಜೆಪಿ ಧ್ವಂಸಗೊಳಿಸುತ್ತಿರುವುದು ಈ ಸಂದರ್ಭದಲ್ಲಿ ಬಹುಸಂಖ್ಯಾತ ಸಮುದಾಯದ ಕ್ರಿಮಿನಲ್ ಮೌನವು ಆತಂಕಕಾರಿಯಾಗಿದೆ ಎಂದು ಟ್ವೀಟ್‌ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ.

ರಾಮನವಮಿ ವೇಳೆ ಖಾರ್ಗೋನ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಹತ್ತಾರು ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ರಾಮನವಮಿ ವೇಳೆ ದಾಳಿ ನಡೆಸಿದ್ದಾರೆಂದು ಆರೋಪಿಸಿ ಜಿಲ್ಲಾಡಳಿತ ಮತ್ತು ಪೊಲೀಸರು, ಹಲವರ ಮನೆಗಳನ್ನು ನೆಲಸಮಗೊಳಿಸಿದರು. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

Comments

Leave a Reply

Your email address will not be published. Required fields are marked *