ಕ್ರಿಕೆಟಿಗ ರಾಹುಲ್ ಒಳ ಉಡುಪು ಕಂಡು ಹೆಸರಾಂತ ನಟಿ ಕಸ್ತೂರಿ ಕಾಮೆಂಟ್ : ಹೌದು ಹುಲಿಯಾ ಎಂದ ರಾಹುಲ್ ಅಭಿಮಾನಿಗಳು

ನ್ನಡದ ತುತ್ತಾಮುತ್ತಾ, ಜಾಣ, ಹಬ್ಬ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಕಸ್ತೂರಿ ನಾನಾ ಕಾರಣಗಳಿಂದಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಭಾಷಾ ವಿಚಾರವಾಗಿ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಟ್ವಿಟ್ ವಾರ್ ನಲ್ಲೂ ಕಸ್ತೂರಿ ಕಾಣಿಸಿಕೊಂಡಿದ್ದರು. ಕಿಚ್ಚನ ಪರವಾಗಿ ಬ್ಯಾಟ್ ಬೀಸಿ ಸುದ್ದಿಯಾಗಿದ್ದರು. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

ಕಸ್ತೂರಿ ಅವರು ಎಂಬತ್ತರ ದಶಕದ ಬಹುಬೇಡಿಕೆಯ ನಟಿ. ಈಗಲೂ ಆ ಬೇಡಿಕೆ ಹಾಗೆಯೇ ಇದೆ. ಸದ್ಯ ಹತ್ತಾರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಸಿನಿಮಾ ರಂಗದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಇಂತಹ ನಟಿ ಇದೀಗ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರ ಒಳ ಉಡುಪಿನ ಬಗ್ಗೆ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

ಟೀಮ್ ಇಂಡಿಯಾ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ ಇದೀಗ ಒಳ ಉಡುಪೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಸ್ತೂರಿ, ಅದಕ್ಕಷ್ಟು ಚಂದದ ಸಾಲುಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟಿಗರ ಚಿಪ್ಸ್, ಕೂಲ್ ಡ್ರಿಂಕ್ಸ್, ಆನ್ ಲೈನ್ ಗೇಮ್ ರೀತಿಯ ಜಾಹೀರಾತಿನಲ್ಲಿ ನಟಿಸಿದ್ದನ್ನು ನೋಡಿದ್ದೆ. ರಾಹುಲ್ ಅವರಿಗಿಂತ ಭಿನ್ನ ಹಾದಿ ಹಿಡಿದಿದ್ದಾರೆ. ಅವರು ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಲುಕ್ ಚೆನ್ನಾಗಿದೆ. ಕಪಾಟಿನಲ್ಲಿರುವ ಹುಡುಗರ ಒಳ ಉಡುಪುಗಳು ಈಗ ಹೊರ ಬರುವ ಭರವಸೆ ಮೂಡಿಸಿದ್ದಾರೆ’ ಎಂದು ಬರೆದಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

ಕಸ್ತೂರಿ ರಂಗ ಕೇವಲ ನಟಿಯಾಗಿರದೇ ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದಾರೆ. ಅಲ್ಲದೇ, ರಾಜಕೀಯ ಮತ್ತು ಧಾರ್ಮಿಕ ವಿಷಯಗಳ ಬಗ್ಗೆಯೂ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ. ಹೀಗಾಗಿ ಪುರುಷರ ಒಳ  ಉಡುಪಿನ ಬಗ್ಗೆ ಅವರು ಮಾಡಿರುವ ಕಾಮೆಂಟ್ ಸದ್ಯ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *