ಟೀಂ ಇಂಡಿಯಾದ ವೇಗಿ ಬುಮ್ರಾ ಜೊತೆ ನಟಿ ಅನುಪಮಾ – ಸುದ್ದಿ ವೈರಲ್

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ನಟಿ ಅನುಪಮಾ ಪರಮೇಶ್ವರನ್ ಇದೀಗ ಟೀಂ ಇಂಡಿಯಾದ  ಜಸ್ಪ್ರೀತ್ ಬುಮ್ರಾ ಹಿಂದೆ ಬಿದ್ದಿದ್ದಾರಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಆಡುತ್ತಿದ್ದಾರೆ. ಈ ಮಧ್ಯೆ ಬುಮ್ರಾ ಹೆಸರು ದಕ್ಷಿಣ ಭಾರತದ ನಟಿ ಅನುಪಮಾ ಜತೆ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬುಮ್ರಾ ಅವರ ಟ್ವಿಟ್ಟರ್ ಖಾತೆಯಾಗಿದೆ.

ಬುಮ್ರಾ ಅವರು ಕೇವಲ 25 ಮಂದಿಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಬಹುತೇಕರು ಕ್ರಿಕೆಟಿಗರೇ ಆಗಿದ್ದಾರೆ. ಅವರ ಮಧ್ಯೆ ನಟಿ ಅನುಪಮಾ ಹೆಸರು ಕಂಡು ಬಂದಿದೆ. ಅವರನ್ನು ಫಾಲೋ ಮಾಡುವುದರ ಜೊತೆಗೆ ಅವರ ಫೋಟೋಗೆ ಲೈಕ್ ಕೊಟ್ಟಿದ್ದಾರೆ.

ಇತ್ತ ಅನುಪಮಾ ಅವರು ಕೂಡ ಬುಮ್ರಾ ಅವರ ಟ್ವಿಟ್ಟರ್ ಅನ್ನು ಫಾಲೋ ಮಾಡುತ್ತಿದ್ದಾರೆ. ಬುಮ್ರಾ ಮಾಡಿರುವ ಟ್ವೀಟ್‍ಗೆ ಲೈಕ್ ನೀಡಿದ್ದಾರೆ. ಇನ್ನು ಇಬ್ಬರ ನಡುವೆ ಟ್ವೀಟ್ ಗಳು ಸಹ ವಿನಿಮಯವಾಗಿದೆ. ಈ ಎಲ್ಲಾ ವಿಚಾರಗಳಿಂದ ಬುಮ್ರಾ ಮತ್ತು ಅನುಪಮಾ ಲವ್ ನಲ್ಲಿ ಬಿದ್ದಿದ್ದಾರ ಎಂಬ ಅನುಮಾನಗಳಿಗೆ ಕಾರಣವಾಗಿದೆ.

ಅಭಿಮಾನಿಗಳು ಇವರಿಬ್ಬರ ಮಧ್ಯೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇದೆ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಸುದ್ದಿ ಹರಿದಾಡುತ್ತಿದೆ.

Comments

Leave a Reply

Your email address will not be published. Required fields are marked *