ಕಾಂಗ್ರೆಸ್ಸನ್ನ ಎಷ್ಟು ದಿನ ಪಲ್ಲಕ್ಕಿಯಲ್ಲಿ ಮೆರೆಸೋದು: ಡಿಎಂಕೆ ಶಾಸಕ ಕಿಡಿ

ಚೆನ್ನೈ: ಯುಪಿಎ ಒಕ್ಕೂಟದ ದ್ರಾವಿಡ ಮುನ್ನೇಟು ಕಳಗಂ (ಡಿಎಂಕೆ) ಪಕ್ಷದ ಶಾಸಕರೊಬ್ಬರು ಕಾಂಗ್ರೆಸ್ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಕಾಂಗ್ರೆಸ್ಸನ್ನು ಎಷ್ಟು ದಿನ ಪಲ್ಲಕ್ಕಿಯಲ್ಲಿ ಕುರಿಸಿ ಮೆರೆಸುವುದು? ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದರೂ ನಾವು ಏಕಾಂಗಿಯಾಗಿ ಕಣಕ್ಕೆ ಇಳಿಯೋಣ ಎಂದು ಡಿಎಂಕೆ ಶಾಸಕ ಕೆ.ಎನ್.ನೆಹರು ಹೇಳಿದ್ದಾರೆ.

ನೀರಿನ ಹಾಹಾಕಾರ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಡಿಎಂಕೆ ತಿರುಚ್ಚಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲದೆ ಈ ಬಾರಿ ಸ್ಥಳೀಯ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸಬೇಕು. ಇದು ನನ್ನ ಅನಿಸಿಕೆ ಮಾತ್ರ. ಆದರೆ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಅವರು ಒಂದು ವೇಳೆ ಕಾಂಗ್ರೆಸ್ ಅನ್ನು ಹೆಗಲ ಮೇಲೆ ಹೊರಬೇಕೆಂದು ತಿಳಿಸಿದರೆ ಹೊತ್ತು ಸಾಗಲು ನಾನು ಸಿದ್ಧನಿರುವೆ ಎಂದರು.

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಜೊತೆಗೆ ಡಿಎಂಕೆ ಮೈತ್ರಿ ಸಾಧಿಸಿತ್ತು. ಈ ಮೂಲಕ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 8ರಲ್ಲಿ ಜಯಗಳಿಸಿತ್ತು. ಡಿಎಂಕೆ ಕಣಕ್ಕಿಳಿದಿದ್ದ 23 ಕ್ಷೇತ್ರಗಳಲ್ಲಿ ಭರ್ಜರಿ ಗೆಲವು ಸಾಧಿಸಿತ್ತು. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಐಎಡಿಎಂಕೆ ಕೇವಲ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಭಾರೀ ಹಿನ್ನಡೆ ಅನುಭವಿಸಿತ್ತು.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದಿಂದ ಹೊರ ಬರುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಆದರೆ ಅವರು ಕಾಂಗ್ರೆಸ್ ಜೊತೆಗೆ ಇರುವುದಾಗಿ ಸ್ಪಷ್ಟನೆ ನೀಡಿ, ಊಹಾಪೋಹಗಳಿಗೆ ತೆರೆ ಎಳೆದಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Comments

Leave a Reply

Your email address will not be published. Required fields are marked *