ಜಾನುವಾರು ಕಳ್ಳಸಾಗಣೆದಾರರಿಂದ ದಾಳಿ- 12 ಮಂದಿ ಪೊಲೀಸರಿಗೆ ಗಾಯ

ಕೋಲ್ಕತ್ತಾ: ಜಾನುವಾರು ಕಳ್ಳಸಾಗಣೆದಾರರು ಪೊಲೀಸರ ಮೇಲೆ ದಾಳಿ ಮಾಡಿದ್ದು, 12 ಮಂದಿ ಪೊಲೀಸರು ಗಾಯಗೊಂಡ ಘಟನೆ ಕೂಚ್ ಬೆಹಾರ್‌ನ ಮೆಖಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ-ಬಾಂಗ್ಲಾದೇಶ ಗಡಿಯ ಬಳಿ ನಡೆದಿದೆ.

ಶನಿವಾರ ರಾತ್ರಿ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಪ್ರದೇಶದಲ್ಲಿ ಜಾನುವಾರು ಕಳ್ಳಸಾಗಣೆದಾರರು ನಡೆಸಿದ ದಾಳಿಯಲ್ಲಿ ಕನಿಷ್ಠ 12 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಜಾನುವಾರು ಕಳ್ಳಸಾಗಣೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಗಡಿ ದಾಟಲು ಜಮಾಯಿಸಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಮಹಿಳೆ ಸೇರಿದಂತೆ ಕಳ್ಳಸಾಗಾಣಿಕೆದಾರರು ಸಿಬ್ಬಂದಿ ಮೇಲೆ ಕಲ್ಲು ತೂರಿ ನಂತರ ಬಿದಿರಿನ ಕೋಲುಗಳಿಂದ ಹಲ್ಲೆ ನಡೆಸಿದರು. ಇದನ್ನೂ ಓದಿ: ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ ಅರೆಸ್ಟ್

ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿ ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಅಕ್ರಮ ಸಾಗಣೆದಾರರು ಗಡಿಯಾಚೆ ಸಾಗಿಸುತ್ತಿದ್ದ 34 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಮೇಖಲಿಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್‍ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್

Comments

Leave a Reply

Your email address will not be published. Required fields are marked *