ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಹಸು

– ಪಂಚಾಯ್ತಿ ಅಧ್ಯಕ್ಷರಿಂದ ಸಹಾಯಧನ

ಬೆಂಗಳೂರು: ಅಪರೂಪದ ಅವಳಿ ಹೆಣ್ಣು ಕರುಗಳಿಗೆ ಗೋವೊಂದು ಜನ್ಮ ನೀಡಿದ್ದು, ಇದೀಗ ಸುತ್ತಮುತ್ತಲ ಜನರ ಆಕರ್ಷಣೆಗೆ ಕಾರಣವಾಗಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ಈ ವಿಸ್ಮಯ ನಡೆದಿದೆ. ಗ್ರಾಮದ ನರಸಮ್ಮ ಎಂಬವರಿಗೆ ಸೇರಿದ ಹಸು ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿ ಸೋಜಿಗಕ್ಕೆ ಕಾರಣವಾಗಿದೆ.

ವೈಜ್ಞಾನಿಕವಾಗಿ ವರ್ಣತಂತುಗಳು ಡೈಜೈಗೋಟಿಕ್ ಪ್ರಕ್ರಿಯೆಯಾದಾಗ ಈ ರೀತಿಯ ಎರಡು ಕರುಗಳು ಜನ್ಮ ತಾಳುತ್ತವೆ. ಅಪರೂಪದ ಹಸು ಕರುಗಳನ್ನು ನೋಡಲು ಸುತ್ತ-ಮುತ್ತಲಿನ ಗ್ರಾಮಗಳ ಹಲವಾರು ಮಂದಿ ಆಗಮಿಸಿ ವೀಕ್ಷಿಸುತ್ತಿದ್ದಾರೆ.

ಸ್ಥಳೀಯ ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಸು ಸಾಕಿದ ನರಸಮ್ಮಳಿಗೆ ಉಡುಗೊರೆ ಹಾಗೂ ಕರುಗಳ ಪೋಷಣೆಗಾಗಿ ಸಹಾಯ ಧನ ನೀಡಿ ಮಾನವೀಯತೆಗೆ ಮುಂದಾಗಿದ್ದಾರೆ. ಅಪರೂಪದ ಹಸು ಕರುಗಳು ವಿಜ್ಞಾನಕ್ಕೆ ವಿಸ್ಮಯವಾಗಿದ್ದು, ಹಸು ಹಾಗೂ ಕರುಗಳೆರಡೂ ಆರೋಗ್ಯವಾಗಿವೆ ಎಂದು ನರಸಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *