ಮಂಡ್ಯ: ಬೇರೆ ಬೇರೆ ಜಾತಿಗೆ ಸೇರಿದ ಎರಡು ಪ್ರಾಣಿಗಳ ನಡುವಿನ ಸ್ನೇಹದ ಕಥೆಯನ್ನು ನೀವು ಕೇಳಿರಬಹುದು. ಅಂತಹುದೇ ಇನ್ನೊಂದು ಕಥೆಯಿಲ್ಲಿದ್ದು, ಮಂಡ್ಯ ತಾಲೂಕಿನ ಸೌದೇನಹಳ್ಳಿ ಗ್ರಾಮದಲ್ಲಿ ಹಸುವೊಂದು ಎರಡು ಮೇಕೆ ಮರಿಗಳಿಗೆ ಹಾಲು ಕುಡಿಸುತ್ತದೆ.

ಗ್ರಾಮದ ಯೋಗೇಶ್ ಎಂಬವರ ಮೇಕೆ ಎರಡು ಮರಿಗಳಿಗೆ ಜನ್ಮ ನೀಡಿತ್ತು. ಮೇಕೆ ಮರಿಗಳಿಗೆ ತಾಯಿ ಇದ್ರೂ ಮನೆಯಲ್ಲಿರುವ ಕೆಂಬಣ್ಣದ ಹಸು ಕಂಡ್ರೆ ವಿಶೇಷ ಪ್ರೀತಿ. ಆ ಹಸುವಿಗೂ ಅಷ್ಟೇ ಮೇಕೆ ಮರಿಗಳೆಂದರೆ ಅಕ್ಕರೆ. ಎರಡು ಮರಿಗಳು ತಮಗೆ ಹಸಿವಾದಾಗಲೆಲ್ಲ ಹಸುವಿನ ಹಾಲನ್ನು ಕುಡಿಯುತ್ತವೆ.
ಹಸುವಿನ ಮೈ ಮೇಲೆ ಮರಿಗಳು ಹತ್ತಿ ಓಡಾಡುತ್ತವೆ. ಖುಷಿಯಿಂದ ಆಟ ಆಡುತ್ತವೆ. ಹಸು ಕೂಡ ಅಷ್ಟೇ ಮೇಕೆ ಮರಿಗಳ ಮೇಲೆ ಕೋಪಿಸಿಕೊಳ್ಳದೇ ಹಾಲುಣಿಸಿ ಸಲಹುತ್ತಿದೆ. ಹಸು ಮತ್ತು ಮೇಕೆ ಮರಿಗಳ ತಾಯಿ, ಮಕ್ಕಳ ವಾತ್ಸಲ್ಯ ಗ್ರಾಮದ ಜನರ ಕುತೂಹಲಕ್ಕೆ ಕಾರಣವಾಗಿದೆ.
https://www.youtube.com/watch?v=TirP_9uFSwc

Leave a Reply