ಇಂದು ಒಂದೇ ದಿನ 16 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ

ಬೆಂಗಳೂರು: ಇಂದು ಒಂದೇ ದಿನ 16 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 5, ಬೆಳಗಾವಿಯಲ್ಲಿ 3, ಮೈಸೂರಲ್ಲಿ 2, ಬಾಗಲಕೋಟೆ 3, ಚಿಕ್ಕಬಳ್ಳಾಪುರ, ಧಾರವಾಡ ಹಾಗೂ ಮಂಡ್ಯದಲ್ಲಿ ತಲಾ ಒಂದೊಂದು ಕೊರೊನಾ ಪ್ರಕರಣ ಪತ್ತೆಯಾಗಿದೆ.

ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದ ಆರೋಗ್ಯ ಇಲಾಖೆ ನೀಡಿರುವ ವರದಿಯಂತೆ ಇದೂವರೆಗೆ ಒಟ್ಟು 197 ಮಂದಿಗೆ ಕೋವಿಡ್ 19 ಖಚಿತವಾಗಿದ್ದು, ಅವುಗಳ ಪೈಕಿ 6 ಮಂದಿ ಸಾವನ್ನಪ್ಪಿದ್ದು, 30 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರೋಗಿಗಳ ವಿವರ:
ರೋಗಿ 182: 50 ವರ್ಷದ ವ್ಯಕ್ತಿಗೆ ತಂದೆಯಿಂದ(ರೋಗಿ 128) ಕೊರೊನಾ ಬಂದಿದ್ದು, ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಗಿ 183: 55 ವರ್ಷದ ವ್ಯಕ್ತಿ ರೋಗಿ 104 ಮತ್ತು 159ನೇ ರೋಗಿಯ ಸಂಪರ್ಕಕ್ಕೆ ಬಂದಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 184: 68 ವರ್ಷ ವ್ಯಕ್ತಿಗೆ ಮಗನಿಂದ(ರೋಗಿ 159) ಕೊರೊನಾ ಬಂದಿದ್ದು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಗಿ 185: 68 ವರ್ಷದ ವ್ಯಕ್ತಿ ಫಾರ್ಮ ಕಂಪನಿಯ ರೋಗಿ 78ರ ಸಹ ಪ್ರಯಾಣಿಕನಾಗಿದ್ದು ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 186: 4 ವರ್ಷದ ಗಂಡು ಮಗು ತಂದೆಯಿಂದ(ರೋಗಿ 165) ಸೋಂಕು ತಗುಲಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 187: 13 ವರ್ಷದ ಬಾಲಕನಿಗೆ ಮಾವನಿಂದ(ರೋಗಿ 165) ಕೊರೊನಾ ಬಂದಿದ್ದು, ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೋಗಿ 188: 9 ವರ್ಷದ ಹೆಣ್ಣು ಮಗುವಿಗೆ ಸೋದರ ಮಾವನಿಂದ(ರೋಗಿ 165) ಬಂದಿದ್ದು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 189: 19 ವರ್ಷದ ಯುವತಿ ದೆಹಲಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 190: 27 ವರ್ಷದ ವ್ಯಕ್ತಿ ದೆಹಲಿ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 191: 48 ವರ್ಷದ ಮಹಿಳೆಗೆ ಸಹೋದರನಿಂದ(ರೋಗಿ 94) ಮತ್ತು ರೋಗಿ 19ರ ಸಂಪರ್ಕಕ್ಕೆ ಬಂದಿದ್ದರಿಂದ ಬಂದಿದೆ. ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 192: 40 ವರ್ಷದ ಮಹಿಳೆ ತಾಯಿಯ(ರೋಗಿ 128) ಸಂಪರ್ಕ ಬಂದಿದ್ದರಿಂದ ಕೊರೊನಾ ಬಂದಿದೆ. ಇವರಿಗೆ ಬೆಳಗಾವಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 193: 22 ವರ್ಷದ ಯುವಕ ಸಹೋದರ(ರೋಗಿ 28)ನನ್ನು ಸಂಪರ್ಕಿಸಿದ್ದರಿಂದ ಬಂದಿದೆ. ಸದ್ಯ ಈತನಿಗೆ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ 194: 27 ವರ್ಷದ ಯುವಕ ದೆಹಲಿಗೆ ಪ್ರಯಾಣ ಬೆಳೆಸಿದ್ದರ ಹಿನ್ನೆಲೆ ಇದೆ. ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರೋಗಿ 195: 66 ವರ್ಷದ ವ್ಯಕ್ತಿ ಮಾರ್ಚ್ 12ರಂದು ಮಣಿಪುರದಿಂದ ಬೆಂಗಳೂರಿಗೆ ಪ್ರಯಾಣಿಸಿರುವ ಹಿನ್ನೆಲೆ ಇದೆ. ಇವರು ಬೆಂಗಳೂರು ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗಿ 196: 42 ವರ್ಷದ ವ್ಯಕ್ತಿ ತೀವ್ರವಾಗಿ ಉಸಿರಾಟದ ಸೋಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನ ಆರ್.ಜಿ.ಐ.ಸಿ.ಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗಿ 197: 27 ವರ್ಷದ ಯುವಕನಿಗೂ ತೀವ್ರವಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಬೆಂಗಳೂರಿನ ಆರ್.ಜಿ.ಐ.ಸಿ.ಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *