ಅಫ್ಘಾನ್‍ನಿಂದ ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಅಫ್ಘಾನ್‍ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.

ಭಾರತೀಯರನ್ನು ವಾಪಸ್ ದೇಶಕ್ಕೆ ತರುವ ಕಾರ್ಯ ಭರದಿಂದ ಸಾಗುತ್ತಿದೆ. ದಿನಕ್ಕೆ ಎರಡು ವಿಮಾನಗಳು ಕಾಬೂಲ್ ಏರ್​ಪೋರ್ಟ್ ನಿಂದ ಹೊರಟು ಭಾರತ ತಲುಪುತ್ತಿದೆ. ವಿವಿಧ ಬ್ಯಾಚ್‍ಗಳ ಮೂಲಕ ಜನರನ್ನು ಕರೆತರಲಾಗುತ್ತಿದೆ. ಆದರೀಗ ಈ ಸ್ಥಳಾಂತರದ ಮಧ್ಯೆ ಕೊರೊನಾ ಆತಂಕ ಶುರುವಾಗಿದೆ.

ಇಂದು ಬೆಳಗ್ಗೆ ಅಫ್ಘಾನ್‍ನಿಂದ ದೆಹಲಿಗೆ ಬಂದ 146 ಭಾರತೀಯ ಪ್ರಯಾಣಿಕರಲ್ಲಿ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಎಲ್‍ಎನ್‍ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:  ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

ಇಂದು ದೆಹಲಿಗೆ ಬಂದು ಇಳಿದಿದ್ದು 146 ಜನರ ಎರಡನೇ ಬ್ಯಾಚ್ ಆಗಿದೆ. ಇಷ್ಟೂ ಜನ ಸ್ವಲ್ಪ ದಿನಗಳ ಹಿಂದೆ ಯುಎಸ್ ಮತ್ತು ಉತ್ತರ ಅಟ್ಲಾಂಟಿಕ ಒಪ್ಪಂದ ಸಂಸ್ಥೆಗಳ (NATO) ಯುದ್ಧ ವಿಮಾನದ ಮೂಲಕ ಕಾಬೂಲ್‍ನಿಂದ ದೋಹಾಕ್ಕೆ ಹೋಗಿದ್ದರು. ಅಲ್ಲಿಂದ ನಾಲ್ಕು ವಿವಿಧ ವಿಮಾನಗಳ ಮೂಲಕ ದೆಹಲಿಗೆ ಬಂದಿಳಿದಿದ್ದಾರೆ. ಹಾಗೇ ಭಾನುವಾರ ಸುಮಾರು 400 ಜನರನ್ನು ವಿವಿಧ ವಿಮಾನಗಳ ಮೂಲಕ ಅಪ್ಘಾನ್‍ನಿಂದ ಭಾರತಕ್ಕೆ ಕರೆತರಲಾಗಿದೆ. ಅದರಲ್ಲಿ 329 ಮಂದಿ ಭಾರತೀಯರೇ ಆಗಿದ್ದಾರೆ. ಅಫ್ಘಾನ್‍ನಲ್ಲಿರುವ ಹಿಂದು ಮತ್ತು ಸಿಖ್ ಸಮುದಾಯದವರನ್ನೂ ಭಾರತಕ್ಕೆ ಕರೆತರಲಾಗುತ್ತಿದೆ.

Comments

Leave a Reply

Your email address will not be published. Required fields are marked *