ಕೋವಿಡ್ ಸೆಂಟರ್‌ನಿಂದ ಬಂದವನ ಬೈಕ್ ಸೀಜ್- ವ್ಯಕ್ತಿಯಿಂದ ಪೊಲೀಸರಿಗೇ ಕ್ಲಾಸ್!

ಮಂಡ್ಯ: ಕೋವಿಡ್ ಕೇರ್ ಸೆಂಟರ್‌ನಿಂದ ಬಂದ ವ್ಯಕ್ತಿಯೊಬ್ಬನ ಬೈಕ್ ಸೀಜ್ ಮಾಡಿದ್ದಾರೆ. ಈ ವೇಳೆ ಪೊಲೀಸರನ್ನೇ ವ್ಯಕ್ತಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರದ ಸಂಜಯ್ ಸರ್ಕಲ್‍ನಲ್ಲಿ ನಡೆದಿದೆ.

ವ್ಯಕ್ತಿಯು ಕೋವಿಡ್ ಕೇರ್ ಸೆಂಟರ್‌ನಿಂದ ಬೈಕ್‍ನಲ್ಲಿ ತನ್ನ ತಂದೆಯನ್ನು ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಪೊಲೀಸರು ಬೈಕ್‍ನ್ನು ಅಡ್ಡಗಟ್ಟಿ ವೀಕೆಂಡ್ ಕರ್ಫ್ಯೂ ಇದ್ದರು ಯಾಕೆ ಹೊರಗಡೆ ಬಂದಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ವ್ಯಕ್ತಿ, ಇಲ್ಲಾ ಸರ್ ನಮ್ಮ ತಂದೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಇದ್ದರು. ನಿನ್ನ ತಂದೆ ಹುಷಾರಾಗಿದ್ದಾರೆ ಡಿಸ್ಚಾರ್ಜ್ ಮಾಡಿಸಿಕೊಂಡು ಕರೆದುಕೊಂಡು ಹೋಗಬಹುದು ಅಂತಾ ಡಾಕ್ಟರ್ ಹೇಳಿದ್ದರು. ಅದಕ್ಕೆ ಅವರನ್ನು ಕರೆದುಕೊಂಡು ಹೋಗಲಿಕ್ಕೆ ಬಂದಿದ್ದೇನೆ ಎಂದು ಪೋಲಿಸರಿಗೆ ಉತ್ತರಿಸಿದ್ದಾನೆ. ಇದನ್ನೂ ಓದಿ:  ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ನವ್ದೀಪ್ ಕೌರ್

ಪೊಲೀಸರು, ವ್ಯಕ್ತಿಯ ಮೇಲೆ ಶಂಕೆಯನ್ನು ವ್ಯಕ್ತಪಡಿಸಿ ನಿಲ್ಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವ್ಯಕ್ತಿಯು ಪೊಲೀಸರ ಮೇಲೆ ಗರಂ ಆಗಿದ್ದಾನೆ. ನಾವು ಹೋಗುತ್ತೇವೆ ಬಿಡಿ ಎಂದಿದ್ದಾರೆ. ಆದರೆ ಪೊಲೀಸರು ಇಲ್ಲ ನಿಂತುಕೊ ಅಂದಿದ್ದಕ್ಕೆ ವ್ಯಕ್ತಿಯು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ದೊಡ್ಡವರನ್ನು ಬಿಟ್ಟು ಬಿಡುತ್ತೀರಾ, ನಮ್ಮಂತ ಜನ ಸಾಮಾನ್ಯರನ್ನು ಹಿಡಿದುಕೊಳ್ಳುತ್ತೀರಾ ಎಂದು ಗರಂ ಆಗಿದ್ದಾನೆ. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ

POLICE JEEP

ಈ ಹಿನ್ನೆಲೆ ಪೊಲೀಸರು ವ್ಯಕ್ತಿಯನ್ನು ಜೀಪ್‍ನಲ್ಲಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನಿಂದ ಬಂದ ತಂದೆಯನ್ನು ರಸ್ತೆಯಲ್ಲಿ ಬಿಟ್ಟು ಮಗನನ್ನು ಕರೆದುಕೊಂಡು ಹೋಗಿದ್ದಾರೆ.

Comments

Leave a Reply

Your email address will not be published. Required fields are marked *