6,100 ಕನ್ನಡಿಗರಿಗೆ ಹೋಟೆಲ್‍ಗಳಲ್ಲಿ ಕ್ವಾರಂಟೈನ್ – 1 ದಿನದ ಬಾಡಿಗೆ ಎಷ್ಟು?

ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ 6,100 ಮಂದಿ ಕನ್ನಡಿಗರನ್ನು ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್ ಗಳನ್ನು ಬುಕ್ ಮಾಡಿದೆ.

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರು ಈ ವ್ಯವಸ್ಥೆ ಮಾಡಿದ್ದಾರೆ. 18 ಫೈವ್ ಸ್ಟಾರ್, 23 ತ್ರಿಸ್ಟಾರ್, 18 ಬಜೆಟ್ ಹೋಟೆಲ್ ಸೇರಿದಂತೆ ಒಟ್ಟು 6,008 ರೂಂ ಗಳನ್ನು ಬುಕ್ ಮಾಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಅವರೇ ತುಂಬಬೇಕಾಗುತ್ತದೆ.

ಮೊದಲು ಬಂದವರು ತಮ್ಮ ಆಯ್ಕೆ ಅನ್ವಯ ಹೋಟೆಲಿಗೆ ಕರೆದುಕೊಂಡು ಹೋಗಲಾಗುತ್ತದೆ. ಒಂದು ಹೋಟೆಲ್ ಭರ್ತಿಯಾದ ಬಳಿಕ ಮತ್ತೊಂದು ಹೋಟೆಲ್ ಬಳಕೆ ಮಾಡಲಾಗುತ್ತದೆ. ಊಟ ತಿಂಡಿ ಎಲ್ಲಾ ಸೇರಿ ಒಂದು ದಿನಕ್ಕೆ ಸರ್ಕಾರವೇ ದರವನ್ನು ನಿಗದಿ ಪಡಿಸಿದೆ. ಒಟ್ಟು 14 ದಿನಗಳ ಕಾಲ ಕನ್ನಡಿಗರು ಈ ಹೋಟೆಲಿನಲ್ಲಿ ಕ್ವಾರಂಟೈನ್ ಆಗಲಿದ್ದು, ಡಬಲ್ ಬೆಡ್ ದರ ಹೆಚ್ಚಾಗಲಿದೆ.

1 ದಿನದ ಬಾಡಿಗೆ ಎಷ್ಟು?
ಊಟ, ತಿಂಡಿ ಸೇರಿ ಫೈವ್ ಸ್ಟಾರ್ ಹೋಟೆಲ್ 4,100 ರೂ., ತ್ರಿಸ್ಟಾರ್ ಹೋಟೆಲ್ – 1,850 ರೂ., ಬಜೆಟ್ ಹೋಟೆಲ್ 1,200 ರೂ. ದರ ನಿಗದಿ ಪಡಿಸಲಾಗಿದೆ.

2ದಿನ ಮೊದಲೇ ಮಂಗಳೂರಿಗೆ : ವಂದೇ ಭಾರತ್ ಮಿಷನ್ 2.0 ಅಡಿಯಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಮುಂದಾಗಿದೆ. ಬುದ್ಧ ಪೂರ್ಣಿಮೆಯ ದಿನ ಬೃಹತ್ ಆಪರೇಷನ್ ಗೆ ಚಾಲನೆ ಸಿಕ್ಕಿದ್ದು, ಮೇ 12ಕ್ಕೆ ದುಬೈನಿಂದ ಮಂಗಳೂರಿಗೆ ವಿಮಾನ ಲ್ಯಾಂಡ್ ಆಗಲಿದೆ. ಮೇ 14ಕ್ಕೆ ಬರಲಿದ್ದ ವಿಮಾನ 2 ದಿನ ಮುಂಚಿತವಾಗಿ ಅಂದರೆ ಮೇ 12ಕ್ಕೆ ಏರ್ ಇಂಡಿಯಾ ವಿಮಾನ ಬರಲಿದೆ. ಸಂಜೆ 4:10ಕ್ಕೆ ಹೊರಟು ರಾತ್ರಿ 9:10ಕ್ಕೆ ಮಂಗಳೂರಿಗೆ ವಿಮಾನ ಲ್ಯಾಂಡ್ ಆಗಲಿದೆ.

ಮೊದಲು ಮೇ 12 ರಂದು ವಿಮಾನ ದುಬೈನಿಂದ ಟೇಕಾಫ್ ಆಗಬೇಕಿತ್ತು. ಆದರೆ ಶುಕ್ರವಾರ ಮೇ 14ಕ್ಕೆ ವಿಮಾನ ಹೊರಡಲಿದೆ ಎನ್ನುವ ವೇಳಾಪಟ್ಟಿ ಸಿಕ್ಕಿತ್ತು. ಕೂಡಲೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಡಿವಿ ಸದಾನಂದ ಗೌಡ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತನಾಡಿ ಗೊಂದಲವನ್ನು ಪರಿಹರಿಸಿದ್ದಾರೆ.

Comments

Leave a Reply

Your email address will not be published. Required fields are marked *