ಬೆಂಗ್ಳೂರಿನ ಕೊರೊನಾ ಸೋಂಕಿತ ಕಾರ್ಮಿಕನ ಟ್ರಾವೆಲ್ ಹಿಸ್ಟರಿ – ಆಟೋದಲ್ಲಿ ಪ್ರಯಾಣ

ಬೆಂಗಳೂರು: ರೋಗಿ ನಂಬರ್ 419 ಕೂಲಿ ಕಾರ್ಮಿಕನ ಟ್ರಾವೆಲ್ ಹಿಸ್ಟರಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಬೆಂಗಳೂರಿನ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ.

ಬಿಹಾರ ಮೂಲದ ಬೊಮ್ಮನಹಳ್ಳಿಯ ಕೂಲಿ ಕಾರ್ಮಿಕ ಆಸ್ಪತ್ರೆಗೆ ಬಾಡಿಗೆ ಆಟೋದಲ್ಲಿ ತೆರಳಿದ್ದನು. ನಗರದ ಮೂರು ಆಸ್ಪತ್ರೆಗಳಿಗೆ ಒಂದೇ ಆಟೋದಲ್ಲಿ ಕಾರ್ಮಿಕ ತೆರಳಿದ್ದನು. ಕೆಎ 03 ಎಜಿ 5248 ಆಟೋದಲ್ಲಿ ಕಾರ್ಮಿಕ ಮೂರು ಆಸ್ಪತ್ರೆಗಳಿಗೆ ಹೋಗಿದ್ದನು. ಹೀಗಾಗಿ ಆಟೋ ಚಾಲಕನನ್ನು ಕ್ವಾರಂಟೈನ್ ಮಾಡಲಾಗಿದ್ದು, ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆಟೋ ಚಾಲಕರು ಸ್ಯಾನಿಟೈಸರ್, ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡರೆ ಒಳ್ಳೆಯದು.

ಟ್ರಾವೆಲ್ ಹಿಸ್ಟರಿ:
ಮಾರ್ಚ್ 23ನೇ ತಾರೀಖು ಆಟೋದಲ್ಲಿ ಮನೆ ಮಾಲೀಕನಿಗೆ ತರಕಾರಿ ಪೂರೈಕೆ ಮಾಡಿದ್ದಾನೆ. ಏಪ್ರಿಲ್ 18 ರಂದು ವೇಣು ಹೆಲ್ತ್ ಕೇರ್ ಗೆ ಆಟೋದಲ್ಲಿ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದಾನೆ.  ಏಪ್ರಿಲ್ 19 ನೇ ತಾರೀಖು ಜಯದೇವ ಹಾಸ್ಪಿಟಲ್, ಏಪ್ರಿಲ್ 20ರಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಏಪ್ರಿಲ್ 20ರಂದು ಕಾರ್ಮಿಕನಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ನಾಲ್ಕು ಬಾರಿಯೂ ಕಾರ್ಮಿಕ ಒಂದೇ ಆಟೋ ಬಳಕೆ ಮಾಡಿದ್ದನು. ಇದೀಗ ಆಟೋ ಡ್ರೈವರ್ ವೈದ್ಯಕೀಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಕಾರ್ಮಿಕನಿಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಆರೋಗ್ಯಧಿಕಾರಿಗಳ ತಂಡ ಈ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನ ಪತ್ತೆ ಹಚ್ಚಲು ತಡರಾತ್ರಿ ಕಾರ್ಯಚರಣೆ ನಡೆಸಿತ್ತು. ಕೊನೆಗೆ ಕಾರ್ಮಿಕನ ಜೊತೆ ಪ್ರೈಮರಿ, ಸೆಕೆಂಡರಿ ಸಂಪರ್ಕದಲ್ಲಿದ್ದ 123 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲಾ ಆರೋಗ್ಯಧಿಕಾರಿ ಡಾ.ಗುಳೂರು ಶ್ರೀನಿವಾಸ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ.

Comments

Leave a Reply

Your email address will not be published. Required fields are marked *