ಕೋವಿಡ್-19 ಮುಂದಿನ ಎರಡು ವಾರ ನಿರ್ಣಾಯಕ – ಭಾರತಕ್ಕೆ WHO ತಜ್ಞರ ಎಚ್ಚರಿಕೆ

ನವದೆಹಲಿ: ಮುಂದಿನ ಎರಡು ವಾರ ಭಾರತಕ್ಕೆ ನಿರ್ಣಾಯಾಕವಾಗಿದ್ದು, ಇಡೀ ದೇಶವನ್ನು ಡೆಡ್ಲಿ ವೈರಸ್ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.

ಭಾರತದಲ್ಲಿ ಹೆಚ್ಚುತ್ತಿರುವ ಕೊವೀಡ್ ಪ್ರಕರಣಗಳ ಬಗ್ಗೆ ಮಾತನಾಡಿರುವ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಭಾರತಕ್ಕೆ ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ, ಎರಡನೇ ಅಲೆಗಿಂತ ಮೂರನೇ ಅಲೆ ಅತ್ಯಂತ ವೇಗವಾಗಿದೆ. ಹೀಗಾಗಿ ಮುಂದಿನ ಎರಡು ವಾರದಲ್ಲಿ ಭಾರಿ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಸೋಂಕು ಏಕಾಏಕಿ ಹೆಚ್ಚುತ್ತಿರುವ ಹಿನ್ನಲೆ ನಿಯಂತ್ರಣಕ್ಕಾಗಿ ಟೆಸ್ಟ್ ಹೆಚ್ಚಿಸಲು ಅವರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO

ಓಮಿಕ್ರಾನ್ ಸಾಮಾನ್ಯ ಶೀತವೆಂದು, ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಇಲ್ಲ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಎರಡು ವಾರದ ಬಳಿಕ ಆಸ್ಪತ್ರೆ ಸೇರುವರ ಸಂಖ್ಯೆ ಹೆಚ್ಚಬಹುದು, ರೋಗಿಗಳನ್ನು ಪರೀಕ್ಷಿಸಲು, ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಸಾಕಾಗದಿರಬಹುದು ಹೀಗಾಗಿ ಈಗಿನಿಂದಲೇ ಎಚ್ಚರಿಕೆ ವಹಿಸಿ ವ್ಯವಸ್ಥಿತ ತಯಾರಿಯಲ್ಲಿರುವಂತೆ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. 15,389 ಸೋಂಕಿತರು ಚೇತರಿಕೆ ಕಂಡಿದ್ದು, 534 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ದೈನಂದಿನ ಪಾಸಿಟಿವಿಟಿ ದರ 4.18% ರಷ್ಟಿದ್ದು, 2,14,004 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು

Comments

Leave a Reply

Your email address will not be published. Required fields are marked *