ಕೊರೊನಾ ನೆಗೆಟಿವ್ ಇದ್ದರೂ ಕ್ವಾರಂಟೈನ್ ಇರುತ್ತೆ: ಸುಧಾಕರ್

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‍ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆ ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನೆಗಟಿವ್ ಬಂದರೂ ಒಂದು ವಾರ ಕ್ವಾರಂಟೈನ್‍ನಲ್ಲಿರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಕೆಲ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಬೊಟ್ಸ್ ವಾನಾ ಹೊಸ ರೂಪಾಂತರಿ ತಳಿಯ ಬಗ್ಗೆ ಮಾತನಾಡಿದ ಅವರು, ಒಂದು ವಾರದಿಂದ ದಕ್ಷಿಣ ಆಫ್ರಿಕಾ, ಇಸ್ರೆಲ್, ಹಾಂಕಾಂಗ್ ನಲ್ಲಿ ಹೊಸ ತಳಿ ಪತ್ತೆಯಾಗಿದೆ. 9 ತಿಂಗಳಿಂದ ಡೆಲ್ಟಾ ಬಿಟ್ಟು ರೂಪಂತಾರಗೊಂಡ ವೈರಸ್ ಕಂಡು ಬಂದಿರಲಿಲ್ಲ. ಇದೀಗ ಕೊರೊನಾ ಹೊಸ ರೂಪಾಂತರಿ ತಳಿಗೆ ಒಮಿಕ್ರಾನ್ ಎಂದು ನಾಮಕರಣ ಮಾಡಿದ್ದಾರೆ. ಸಮುದಾಯಕ್ಕೆ ಬಂದರೆ ಈ ವೈರಸ್ ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಇದೆ. ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿ, ಹರಡುವ ತೀವ್ರತೆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ದನ್ನೂ ಓದಿ: ಹೊಸ ಕೋವಿಡ್ ತಳಿಯಿಂದ ತಲ್ಲಣ – ಸಂಜೆ ಸಿಎಂ ಬೊಮ್ಮಾಯಿ ತುರ್ತು ಸಭೆ

ಶುಕ್ರವಾರ ನಿನ್ನೆ ಸಭೆ ನಡೆಸಿದ್ದೇವೆ. ಏರ್ ಪೋರ್ಟ್‌ಗಳಲ್ಲಿ ಕೂಡ ಟೆಸ್ಟ್ ಮಾಡಲಾಗುತ್ತಿದೆ. ನೆಗಟಿವ್ ಬರುವ ತನಕ ಹೊರಗಡೆ ಬರುವ ಹಾಗಿಲ್ಲ. ಈಗಾಗಲೇ ಮಾರ್ಗ ಸೂಚಿ ಪ್ರಕಟ ಮಾಡಿದ್ದೇವೆ. ನೆಗಟಿವ್ ಬಂದ ಮೇಲೂ ಒಂದು ವಾರ ಕ್ವಾರಂಟೈನ್‍ನಲ್ಲಿರಬೇಕೆಂದು ಸೂಚಿಸಿದ್ದೇವೆ.

ಧಾರವಾಡ ವಿದ್ಯಾರ್ಥಿಗಳ ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗಿದೆ. ಇಂಟರ್ ನ್ಯಾಷನಲ್ ಸ್ಕೂಲ್‍ನ 30 ಮಕ್ಕಳಿಗೆ ಪಾಸಿಟಿವ್ ಆಗಿದೆ. ಆದರೆ ಯಾರಲ್ಲೂ ಗಂಭೀರ ಗುಣಲಕ್ಷಣಗಳು ಕಂಡುಬಂದಿಲ್ಲ. ಇನ್ನೂ 45 ಲಕ್ಷ ಜನ ಲಸಿಕೆ ತೆಗದುಕೊಂಡಿಲ್ಲ. ರಾಷ್ಟ್ರೀಯ ಸರಾಸರಿಯಲ್ಲಿ ಮೊದಲ ಡೋಸ್ 90 ರಷ್ಟು ಲಸಿಕೆಯಾಗಿದೆ ಎಂದು ತಿಳಿಸಿದ್ದಾರೆ. ದನ್ನೂ ಓದಿ: ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್‌ ಘೋಷಣೆ, 87 ಮಂದಿಗೆ ಸೋಂಕು

ಈ ಹೊಸ ತಳಿಯು ಈ ಹಿಂದಿನ ರೋಗಲಕ್ಷಣಗಳನ್ನೇ ಹೊಂದಿದೆ. ಇದೊಂದು ವೇಗವಾಗಿ ಹರಡುವ ರೂಪಾಂತರ ತಳಿಯಾಗಿದ್ದು, ನಾಲ್ಕು ರಾಷ್ಟ್ರಗಳಲ್ಲಿ ಈ ವೈರಸ್ ಹರಡಿದೆ. ಹೀಗಾಗಿ ಅಲ್ಲಿಂದ ಬರುವ ಪ್ರಯಾಣಿಕ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದಿದ್ದಾರೆ. ದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್ 

ಇದೇ ವೇಳೆ ನಾನ್ ಕೋವಿಡ್ ಮೆಡಿಸಿನ್ ಕೊರತೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಗಳಲ್ಲಿ ಡಿಹೆಚ್‍ಓಗಳ ಅಕೌಂಟ್‍ಗೆ 38 ಕೋಟಿ ಹಣ ಕಳಿಸಿಕೊಟ್ಟಿದ್ದೇವೆ. ಜನರಲ್ ಮೆಡಿಸಿನ್‍ಗೆ 2-3 ದಿನಗಳಲ್ಲಿ ಔಷಧಿ ಲಭ್ಯವಾಗಲಿದೆ. ವೈರಸ್ ಹರಡಿರುವ ದೇಶಗಳಿಂದ ಬರುವ ಪ್ರಯಾಣಿಕರ ಟೆಸ್ಟಿಂಗ್ ನಡೆಸಿ, 250-300 ಜನರಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *