ಉತ್ತುಂಗದಲ್ಲಿರುವ ಕೋವಿಡ್‌ ಸೋಂಕು: ಮೂರನೇ ಅಲೆ ಶೀಘ್ರವೇ ಅಂತ್ಯ?

ನವದೆಹಲಿ: ಭಾರತದಲ್ಲಿ ಉತ್ತುಂಗದಲ್ಲಿರುವ ಮೂರನೇ ಅಲೆ ಶೀಘ್ರ ಅಂತ್ಯವಾಗಬಹುದು. ಆಫ್ರಿಕಾ ಮಾದರಿಯಲ್ಲೇ ನಮ್ಮ ದೇಶದಲ್ಲೂ ಸೋಂಕು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ಓಮಿಕ್ರಾನ್ ಮತ್ತು ಡೆಲ್ಟಾ ಅಬ್ಬರ ಈಗಾಗಲೇ ದೇಶದಲ್ಲಿ ಉತ್ತುಂಗದಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ಇಳಿಮುಖವಾದಂತೆ ಸೋಂಕಿನ ಪ್ರಕರಣಗಳು ದಿಢೀರ್ ಇಳಿಮುಖವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5T ಸೂತ್ರ: ಪ್ರಧಾನಿ ಮೆಚ್ಚುಗೆ

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ಉತ್ತುಂಗಕ್ಕೆ ಹೋಗಿತ್ತು. ಪ್ರತಿನಿತ್ಯ 1.27 ಲಕ್ಷ ಪ್ರಕರಣಗಳು ದಾಖಲಾಗುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಬಳಿಕ ಈಗ ಸೋಂಕಿನ ಪ್ರಕರಣ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು ಈಗ ಪ್ರತಿನಿತ್ಯ 80 ಸಾವಿರದ ಅಸುಪಾಸಿನಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ

ಇದೇ ಮಾದರಿಯಲ್ಲಿ ದೇಶದಲ್ಲೂ ಸದ್ಯ ಸೋಂಕು ಗರಿಷ್ಠ ಮಟ್ಟ ತಲುಪಿದೆ. ಗುರುವಾರ ಭಾರತದಲ್ಲಿ ಒಂದೇ ದಿನ 2,47,417 ಪ್ರಕರಣ ದಾಖಲಾಗಿದೆ. 620 ಮಂದಿಗೆ ಓಮಿಕ್ರಾನ್‌ ಬಂದಿದ್ದು ಒಟ್ಟು ಓಮಿಕ್ರಾನ್‌ ಸೋಂಕಿತರ ಸಂಖ್ಯೆ 5,500 ದಾಟಿದೆ.

ಗಮನಿಸಬೇಕಾದ ವಿಚಾರ ಏನೆಂದರೆ ಎರಡನೇ ಅಲೆಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಎರಡನೇ ಅಲೆಯ ವೇಳೆ ದೇಶಾದ್ಯಂತ ಆಮ್ಲಜನಕದ ಸಮಸ್ಯೆಯಾಗಿತ್ತು. ಆದರೆ ಮೂರನೇ ಅಲೆಯಲ್ಲಿ ಐಸಿಯುಗೆ ದಾಖಲಾಗುವವರ ಸಂಖ್ಯೆ ಬಹಳ ಕಡಿಮೆಯಿ ಇರುವುದು ಸಮಾಧಾನದ ಸಂಗತಿ.

ಈಗಾಗಲೇ ಗರಿಷ್ಠ ಪ್ರಮಾಣದಲ್ಲಿರುವ ಸೋಂಕು ಆಫ್ರಿಕಾ ಮಾದರಿಯಲ್ಲಿ ಮುಂದಿನ ವಾರದಿಂದ ಇಳಿಕೆಯಾಗಬಹುದು ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *