ಓಮಿಕ್ರಾನ್ ಪ್ರಕರಣ ಹೆಚ್ಚಳ – ಬೂಸ್ಟರ್ ಡೋಸ್ ಬಗ್ಗೆ ಇಂದು ಕೇಂದ್ರದಿಂದ ಮಹತ್ವದ ಸಭೆ

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಕೇಸ್‍ಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಓಮಿಕ್ರಾನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಸೀರಿಯಸ್ ಆಗಿದ್ದು, ಬೂಸ್ಟರ್/ಹೆಚ್ಚುವರಿ ಡೋಸ್ ನೀಡಿಕೆ ಕುರಿತು ಇಂದು ಮಹತ್ವದ ಸಭೆ ನಡೆಯಲಿದೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ ತಜ್ಞರ ಜೊತೆ ಸಭೆ ನಡೆಯಲಿದೆ. ಹೆಚ್ಚುವರಿ ಡೋಸ್ ಕೊಡ್ಬೇಕಾ..? ಬೂಸ್ಟರ್ ಡೋಸ್‍ಗೆ ಅನುಮತಿಸಬೇಕಾ?, ಅನುಮತಿಸಿದ್ರೂ ಯಾರಿಗೆ ಬೂಸ್ಟರ್ ಡೋಸ್ ಕೊಡ್ಬೇಕು? ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಬೂಸ್ಟರ್ ಬದಲು ಹೆಚ್ಚುವರಿ ಮೂರನೇ ಡೋಸ್ ಕಡೆಗೆ ಕೇಂದ್ರ ತಜ್ಞರ ಒಲವು ಇದ್ದು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚುವರಿ 3ನೇ ಡೋಸ್ ಸಾಧ್ಯತೆ ಇದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ- ನಾಲ್ಕೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ದಂಡ ವಸೂಲಿ

ಇತ್ತ ಹೆಚ್ಚುವರಿ 3ನೇ ಡೋಸ್ ಮತ್ತು ಬೂಸ್ಟರ್ ಡೋಸ್ ಪ್ರತ್ಯೇಕ ಎಂದು ಕೇಂದ್ರ ತಜ್ಞರು ಹೇಳುತ್ತಿದ್ದಾರೆ. ಎರಡು ಡೋಸ್ ಪಡೆದ್ರೂ ರೋಗ ನಿರೋಧಕ ಶಕ್ತಿ ಹೆಚ್ಚದವರಿಗೆ ಹೆಚ್ಚುವರಿಯಾಗಿ ಮೂರನೇ ಡೋಸ್ ನೀಡಬಹುದು. ಈಗ ಡಬಲ್ ಡೋಸ್ ಪಡೆದ ಎಲ್ಲರಿಗೂ ನಿಗದಿತ ಅವಧಿ ಬಳಿಕ ನೀಡುವ ಲಸಿಕೆಗೆ ಬೂಸ್ಟರ್ ಡೋಸ್ ಎನ್ನುತ್ತಾರೆ ಎಂದು ತಜ್ಞರು ವ್ಯಾಖ್ಯಾನಿಸಿದ್ದಾರೆ.

Comments

Leave a Reply

Your email address will not be published. Required fields are marked *