ನರೋಡಾ ಹತ್ಯಾಕಾಂಡ ಪ್ರಕರಣ: ಅಮಿತ್ ಶಾಗೆ ವಿಶೇಷ ಎಸ್‍ಐಟಿ ಕೋರ್ಟ್ ಸಮನ್ಸ್

ಅಹಮದಾಬಾದ್: 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಧಿಸಿದಂತೆ ಸಪ್ಟೆಂಬರ್ 18ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ಎಸ್‍ಐಟಿ ನ್ಯಾಯಾಲಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸಮನ್ಸ್ ಜಾರಿ ಮಾಡಿದೆ.

ಪ್ರಕರಣದ ಪ್ರಮುಖ ಆರೋಪಿ, ಗುಜರಾತ್‍ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರ ರಕ್ಷಣಾ ಸಾಕ್ಷಿಯಾಗಿ ವಿಚಾರಣೆಗೆ ಹಾಜರಾಗುವಂತೆ ಷಾ ಅವರಿಗೆ ಕೋರ್ಟ್ ಸೂಚಿಸಿದೆ. ಇದೇ ವೇಳೆ ಸೆ.18 ರಂದು ವಿಚಾರಣೆಗೆ ಗೈರಾದರೆ ಮತ್ತೆ ಸಮನ್ಸ್ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಏನಿದು ಪ್ರಕರಣ?
ನರೋಡಾ ಗಾಮ್ ಹತ್ಯಾಕಾಂಡ ನಡೆದಾಗ ನಾನು ತಾನು ಆ ಘಟನಾ ಸ್ಥಳದಲ್ಲಿರಲಿಲ್ಲ ಎಂಬುವುದನ್ನು ಮಾಯಾ ಕೊಡ್ನಾನಿ ಸಾಬೀತು ಪಡಿಸಬೇಕಿದ್ದು, ಅಮಿತ್ ಶಾ ಸೇರಿದಂತೆ 14 ಮಂದಿಯನ್ನು ಸಾಕ್ಷಿಗಳಾಗಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಮಾಯಾ ಪತಿ ಸುರೇದ್ರ ಕೊಡ್ನಾನಿ, ಬಿಜೆಪಿ ಶಾಸಕ ಅಮರೇಶ್ ಗೋವಿಂದಭಾಯಿ ಪಟೇಲ್ ಸೇರಿದಂತೆ 12 ಮಂದಿ ಸಾಕ್ಷಿ ಹೇಳಿದ್ದಾರೆ. ಅಮಿತ್ ಶಾ ಮತ್ತು ಇತರ ಕೆಲವರಿಗೆ ಕೊಡ್ನಾನಿ ಪರ ರಕ್ಷಣಾ ಸಾಕ್ಷಿಯಾಗಿ ಹಾಜರಾಗಲು ಸಮನ್ಸ್ ನೀಡುವ ಬಗ್ಗೆ ಏಪ್ರಿಲ್‍ನಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಅನುಮತಿ ನೀಡಿತ್ತು.

ಆರೋಪ ಏನಿದೆ?
ನರೋಡಾ ಗಾಮ್ ನಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ, ಪ್ರಚೋದಿಸಿ ಹತ್ಯಾಕಾಂಡ ನಡೆಸಿದ ಆರೋಪ ಮಾಯಾ ಕೊಡ್ನಾನಿ ಮೇಲಿದೆ. 2002ರ ಫೆಬ್ರವರಿ 28ರಂದು ಈ ಹತ್ಯಾಕಾಂಡ ನಡೆದಿದ್ದು 97 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಆರೋಪಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮಾಯಾ ಅವರು ಗುಜರಾತ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನರೋಡಾ ಗಾಮ್ ಪ್ರಕರಣದ ವಿಚಾರಣೆಯನ್ನು 4 ತಿಂಗಳಿನೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು.

ಈ ಹತ್ಯಾಕಾಂಡ ನಡೆದ ವೇಳೆ ನಾನು ಆ ಸ್ಥಳದಲ್ಲಿ ಇರಲಿಲ್ಲ. ವಿಧಾನಸಭೆಯ ಅಧಿವೇಶನ ನಡೆದ ಬಳಿಕ ಸೋಲಾ ಆಸ್ಪತ್ರಗೆ ತೆರಳಿದ್ದೆ ಎಂದು ಮಾಯಾ ಕೊಡ್ನಾನಿ ನ್ಯಾಯಾಲಯದಲ್ಲಿ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *