ಪಾಕ್ ಸೇನಾ ಮುಖ್ಯಸ್ಥರ ರಾಜೀನಾಮೆಗೆ ಒತ್ತಾಯ- ಕಂಪ್ಯೂಟರ್ ಇಂಜಿನಿಯರ್​ಗೆ 5 ವರ್ಷ ಜೈಲು ಶಿಕ್ಷೆ

QAMAR JAVED BAJWA

ಇಸ್ಲಮಾಬಾದ್: ಪಾಕ್ ಸೇನಾ ಮುಖ್ಯಸ್ಥರ ರಾಜೀನಾಮೆ ಆಗ್ರಹಿಸಿದ ಪಾಕಿಸ್ತಾನ ಸೇನಾಪಡೆಯ ನಿವೃತ್ತ ಮೇಜರ್ ಜನರಲ್ ಪುತ್ರನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಿಲಿಟರ್ ಕೋರ್ಟ್ ಆದೇಶ ಹೊರಡಿಸಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

JAIL

ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರ ಸೇವಾವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದ ಹಸ್ಸನ್ ಅಸ್ಕರಿ ಪತ್ರ ಬರೆದಿದ್ದರು. ಪತ್ರದಲ್ಲಿ ಬಾಜ್ವಾ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

ನಿವೃತ್ತ ಮೇಜರ್ ಜನರ ಜಾಫರ್ ಮೇಹದಿ ಅಸ್ಕರಿ ಅವರ ಪುತ್ರರಾಗಿರುವ ಕಂಪ್ಯೂಟರ್ ಇಂಜಿನಿಯರ್ ಹಸ್ಸನ್ ಅಸ್ಕರಿ ಅವರಿಗೆ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ ಅವರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

PAK

ಈ ವರ್ಷ ಜುಲೈನಲ್ಲಿ ನಡೆಸಿದ ವಿಚಾರಣೆಯಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ನಿಯೋಜಿಸಲಾಗಿದ್ದ ಅಧಿಕಾರಿಯೊಬ್ಬರು ಅಸ್ಕರಿಯನ್ನು ಪ್ರತಿನಿಧಿಸಿದ್ದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ- 22 ದಿನಗಳ ನಂತರ ಜೈಲಿನಿಂದ ಆರ್ಯನ್ ಖಾನ್ ಬಿಡುಗಡೆ

ಅರ್ಜಿಯಲ್ಲಿ ಮಗನ ಶಿಕ್ಷೆಯನ್ನು ತಂದೆ ಪ್ರಶ್ನಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ತನ್ನ ಮಗನಿಗೆ ತನ್ನ ಆಯ್ಕೆಯ ವಕೀಲರನ್ನು ಒದಗಿಸಲಾಗಿಲ್ಲ. ತನ್ನ ಮಗನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಅವರು ಒತ್ತಾಯಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಯಾವಾಗ ನಡೆಸುತ್ತದೆ ಎಂಬುದು ತಿಳಿದಿಲ್ಲ.

Comments

Leave a Reply

Your email address will not be published. Required fields are marked *