ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಕೃಷ್ಣಾಪುರ ಗ್ರಾಮದ ದೇವಾಲಯದ ಒಳಗೆ ಜೋಡಿಯೊಂದು ರಾಸಲೀಲೆಯಲ್ಲಿ ತೊಡಗಿದ್ದು, ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಕೃಷ್ಣಾಪುರ ಗ್ರಾಮದ ಆರಾಧ್ಯ ದೈವ ಚಂದ್ರಮೌಳೇಶ್ವರ ದೇವಸ್ಥಾನದ ಒಳ ಆವರಣದಲ್ಲಿ ಈ ಜೋಡಿ ಸಿಕ್ಕಿಬಿದ್ದಿದೆ. ಜೋಡಿಯೊಂದು ರಾಜಾರೋಷವಾಗಿ ಹಾಡಹಗಲಲ್ಲೇ ರಾಸಲೀಲೆ ನಡೆಸಿದ್ದಾರೆ. ದೇವಸ್ಥಾನದ ಬಾಗಿಲು ಹಾಕಿದ ನಂತರ ಪ್ರತಿದಿನ ಈ ಜೋಡಿ ಬೈಕಿನಲ್ಲಿ ಬರುತ್ತಿದ್ದರು. ದಿನಾ ಗಮನಿಸುತ್ತಿದ್ದ ಗ್ರಾಮಸ್ಥರು ಕುತೂಹಲದಿಂದ ಪರಿಶೀಲನೆ ನಡೆಸಿದಾಗ ಗ್ರಾಮಸ್ಥರಿಗೆ ಇಬ್ಬರು ರಾಸಲೀಲೆಯಲ್ಲಿ ತೊಡಗಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ದೇವಾಸ್ಥಾನದ ಆವರಣದಲ್ಲಿಯೇ ಜೋಡಿ ಸೆಕ್ಸ್ ಕ್ರಿಯೆಯಲ್ಲಿ ತೊಡಗಿದ್ದಾರೆ. ಇವರನ್ನು ಗಮನಿಸಿದ ಗ್ರಾಮಸ್ಥರು ದೇವಾಲಯದ ಕಾಂಪೌಂಡ್ ಹೊರಗೆ ನಿಂತು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ರೆಕಾರ್ಡ್ ಮಾಡುತ್ತಲೇ ಗ್ರಾಮಸ್ಥರು ದೇವಾಲಯದ ಒಳಗೆ ಹೋಗಿದ್ದಾರೆ. ಮೊಬೈಲಿನಲ್ಲಿ ರೆಕಾರ್ಡ್ ಮಾಡುತ್ತಾ ಜೋಡಿ ಸಮೀಪ ಬರುವವರೆಗೂ ಅವರು ಗಮನಿಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ.
ಗ್ರಾಮಸ್ಥರನ್ನು ನೋಡಿದ ಕೂಡಲೇ ಇಬ್ಬರು ಮುಖಮುಚ್ಚಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಕಳ್ಳಜೋಡಿ ಕಳಲೆ ಗ್ರಾಮದವರೆಂದು ತಿಳಿದು ಬಂದಿದೆ. ದೇವಾಲಯದ ಆವರಣದಲ್ಲೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಗ್ರಾಮಸ್ಥರು ಇಬ್ಬರಿಗೂ ಛೀಮಾರಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply