ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಬಹಿರಂಗಪಡಿಸಿದ ಜೋಡಿ

ಚಿತ್ರದುರ್ಗ: ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ.

ಚಿತ್ರದುರ್ಗದ ಸಲ್ಮಾ (ಹೆಸರು ಬದಲಾಯಿಸಲಾಗಿದೆ) ಮತ್ತು ಮಹ್ಮದ್ ಮೋಸಿನ್ ನಡುವೆ ಪ್ರೇಮಾಂಕುರ ಉಂಟಾಗಿತ್ತು. ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯ ಮದುವೆ ಉಮೇರಾ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ನಾವು ಸ್ವಇಚ್ಛೆಯಿಂದ ಮನೆಯಿಂದ ಹೊರ ಬಂದಿದ್ದೇವೆ. ನಮ್ಮ ಪ್ರೀತಿಗೆ ಯಾರ ಸಹಾಯವೂ ಸಿಗಲಿಲ್ಲ. ಐದು ವರ್ಷಗಳಿಂದ ನಾವಿಬ್ಬರು ಪ್ರೀತಿಸುತ್ತಿರುವ ವಿಷಯವನ್ನು ಮನೆಯವರಿಗೆ ತಿಳಿಸಿದರು ನಮ್ಮಿಬ್ಬರ ಪ್ರೀತಿಯನ್ನು ವಿರೋಧಿಸಿದರು. ಹಾಗಾಗಿ ನಾವಿಬ್ಬರು ಮನೆ ಬಿಟ್ಟು ಬರಬೇಕಾದ ಪರಿಸ್ಥಿತಿ ಬಂತು. ಕೊನೆಗೆ ನಮ್ಮ ಪೋಷಕರು ಇಬ್ಬರ ಮದುವೆ ಮಾಡಿಸುವುದಾಗಿ ಹೇಳಿ ನನ್ನನ್ನು ಕರೆಸಿ ಮಾವನ ಮನೆಯಲ್ಲಿ ಇರಿಸಲಾಯಿತು. ಆದರೆ ಅಲ್ಲಿ ಮೋಸಿನ್ ಜೀವಕ್ಕೆ ಅಪಾಯವಿದೆ ಅಂತಾ ತಿಳಿದ ಕೂಡಲೇ ಮಾವನ ಮನೆಯಿಂದಲೂ ಹೊರ ಬಂದಿದ್ದೇನೆ. ಸದಯ ನಾವಿಬ್ಬರೂ ಖುಷಿಯಾಗಿದ್ದು, ನನ್ನ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದು ಯುವತಿ ಹೇಳಿದ್ದಾಳೆ.

ಇತ್ತ ಯುವಕ ಮೂರು ದಿನಗಳ ಹಿಂದೆಯೇ ಮದುವೆ ಆಗಿದ್ದೇವೆ. ನಾನು ಸಲ್ಮಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಎಲ್ಲರಿಗೂ ಹೇಳಲು ಇಷ್ಟಪಡುತ್ತೇನೆ. ಮನೆಯವರಿಂದ ಮದುವೆಗ ವಿರೋಧ ವ್ಯಕ್ತವಾಗಿದ್ದರಿಂದ ಯಾರಿಗೂ ಹೇಳದೆ ಮನೆಯಿಂದ ಹೊರ ಬರಬೇಕಾಯಿತು ಎಂದು ಯುವಕ ಹೇಳಿದ್ದಾನೆ.

ಇತ್ತ ಸಲ್ಮಾ ಭದ್ರಾವತಿಯಲ್ಲಿಯ ಮಾವನ ಮನೆಯಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪೋಷಕರು ಅಲ್ಲಿಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಮದುವೆ ಬಳಿಕ ಸಲ್ಮಾ ಮತ್ತು ಮೋಸಿನ ರಕ್ಷಣೆ ಕೋರಿ ಚಿತ್ರದುರ್ಗದ ಎಸ್ ಪಿ ಕಚೇರಿಗೆ ಆಗಮಿಸಿದ್ದರು. ಪ್ರಕರಣ ಭದ್ರಾವತಿಯಲ್ಲಿ ದಾಖಲಾಗಿದ್ದರ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ದೂರು ದಾಖಲಾದ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

Comments

Leave a Reply

Your email address will not be published. Required fields are marked *