ಫಸ್ಟ್ ನೈಟ್ ರೆಕಾರ್ಡ್ ಮಾಡಲು ದಂಪತಿಯಿಂದ ವಿಡಿಯೋ ಗ್ರಾಫರ್ ಸರ್ಚ್

-ರಾತ್ರಿ 1 ರಿಂದ 3 ಗಂಟೆವರೆಗೆ ಮಾತ್ರ

ಲಂಡನ್: ಮದುವೆಯಾದ ಜೋಡಿಯೂ ತಮ್ಮ ಮೊದಲ ರಾತ್ರಿಯಂದು ಯಾವುದೇ ಭಂಗ ಬರಬಾರದು ಎಂದು ಇಷ್ಟಪಡುತ್ತಾರೆ. ಆದರೆ ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯನ್ನು ರೆಕಾರ್ಡ್ ಮಾಡಲು ವಿಡಿಯೋ ಗ್ರಾಫರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇಂಗ್ಲೆಂಡ್ ನ ಜೋಡಿಯೊಂದು ಸೆಪ್ಟಂಬರ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ. ಆದರೆ ಈ ದಂಪತಿ ತಮ್ಮ ಮೊದಲ ರಾತ್ರಿಯನ್ನು ಚಿತ್ರೀಕರಿಸಲು ವೃತ್ತಿಪರ ವಿಡಿಯೋ ಗ್ರಾಫರ್ ಬೇಕಾಗಿದ್ದಾನೆ ಅಂತ ಮೂರನೇ ವ್ಯಕ್ತಿಗಾಗಿ ಜಾಹೀರಾತನ್ನು ನೀಡಿದ್ದಾರೆ.

ಅಪರಿಚಿತ ದಂಪತಿ ಈ ಬಗ್ಗೆ ಜಾಹೀರಾತು ನೀಡಿದ್ದಾರೆ. ಜೊತೆಗೆ ರಾತ್ರಿ 1 ರಿಂದ 3 ಗಂಟೆಯವರೆ ಮಾತ್ರ ಮೊದಲ ರಾತ್ರಿಯನ್ನ ಚಿತ್ರೀಕರಣ ಮಾಡಬೇಕಿದೆ. ಆತನಿಗೆ 2000 ಡಾಲರ್ ಸುಮಾರು 2 ಲಕ್ಷ ಹಣವನ್ನು ನೀಡುವುದಾಗಿ ಜಾಹೀರಾತಿನಲ್ಲಿ ತಿಳಿಸಿದ್ದಾರೆ.

ಈ ದಂಪತಿ, ನಾವಿಬ್ಬರು ಪ್ರೀತಿಸಿ ಮದುವೆಯಾಗುತ್ತಿದ್ದೇವೆ. ನಮ್ಮ ಮದುವೆಯ ಸಂಭ್ರಮ ಕೇವಲ ದಿನಕ್ಕಷ್ಟೆ ಸೀಮಿತವಾಗಿರಬಾದರು. ನಮ್ಮ ಪ್ರೀತಿಯ ಪ್ರತಿ ಘಳಿಗೆಯೂ ಮುಖ್ಯವಾಗಿದೆ. ಆದ್ದರಿಂದ ನಮ್ಮ ಮೊದಲ ರಾತ್ರಿ ತುಂಬಾ ಮಹತ್ವವಾದದ್ದು, ಅದಕ್ಕಾಗಿ ವಿಡಿಯೋ ಗ್ರಾಫರ್ ಹುಡುಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ನಾವಿಬ್ಬರು ಮದುವೆಯ ಮೊದಲ ರಾತ್ರಿಯ ಚಿತ್ರೀಕರಣ ಮಾಡಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ದುರದೃಷ್ಟವಶಾತ್ ನಮಗೆ ಇನ್ನು ವಿಡಿಯೋ ಗ್ರಾಫರ್ ಸಿಕ್ಕಿಲ್ಲ. ನಮ್ಮಿಂದ ಹುಡುಕಲು ಸಾಧ್ಯವಾಗಲಿಲ್ಲ. ತುಂಬಾ ಕಡೆ ಸಾಕಷ್ಟು ಸುತ್ತಾಡಿದ್ದೇವೆ. ಆದರೆ ವಿಡಿಯೋ ಗ್ರಾಫರ್ ಸಿಗುತ್ತಿಲ್ಲ.

ನಾನು ತುಂಬಾ ವಿಡಿಯೋ ಗ್ರಾಫರ್ ನ್ನು ಕೇಳಿದೆವು. ಆದರೆ ಯಾರು ಇದಕ್ಕೆ ಒಪ್ಪಲಿಲ್ಲ. ಇದು ತಪ್ಪು ಎಂದು ನಮಗೆ ತಿಳಿದಿದೆ. ಆದರೆ ಆ ದಿನದ ಕ್ಷಣಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ, ಅದಕ್ಕಾಗಿ ನಾವು ಹುಡುಕುತ್ತಿದ್ದೇವೆ ಎಂದು ದಂಪತಿ ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *