ಸಬ್ ರಿಜಿಸ್ಟರ್ ಕಚೇರಿಗೆ ಮದ್ವೆಯಾಗಲು ಬಂದ ಜೋಡಿ-ಅವ್ರಿಗಿಂತ ಮುಂಚೆಯೇ ಕುಟುಂಬಸ್ಥರ ಎಂಟ್ರಿ

ದಾವಣಗೆರೆ: ಪ್ರೇಮಿಗಳು ಮದುವೆಯಾಗಲು ಮುಂದಾಗಿದ್ದಕ್ಕೆ ಮನೆಯವರು ಸಬ್ ರಿಜಿಸ್ಟರ್ ಕಚೇರಿ ಮುಂದೆಯೇ ಪ್ರೇಮಿಗಳ ಕುಟುಂಬದವರು ಹೊಡೆದಾಡಿಕೊಂಡ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.

ಜಿಲ್ಲೆಯ ಹೊಸನಾಯ್ಕನಹಳ್ಳಿಯ ಬಸವರಾಜ್ ಹಾಗೂ ಚಿತ್ರದುರ್ಗ ಜಿಲ್ಲೆ ಖಂಡೇನಹಳ್ಳಿ ತಾಂಡದ ನಯನ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದವರ ವಿರೋಧದ ಹಿನ್ನೆಲೆ ಇಂದು ದಾವಣಗೆರೆಯ ಸಬ್ ರಿಜಿಸ್ಟರ್ ಅಫೀಸ್ ನಲ್ಲಿ ಮದುವೆಯಾಗಲು ಮುಂದಾಗಿದ್ದರು. ವಿಷಯ ತಿಳಿದು ಎರಡು ಕುಟುಂಬದವರು ಸಬ್ ರಿಜಿಸ್ಟರ್ ಅಫೀಸ್ ಗೆ ಅಗಮಿಸಿದ್ರು.

ಯುವತಿಯನ್ನು ಕರೆದುಕೊಂಡಲು ಹೋಗಲು ಆಕೆಯ ಮನೆಯವರು ಪ್ರಯತ್ನಿಸಿದ್ದರು. ನಯನಾ ಮನೆಗೆ ಹೋಗಲು ಒಪ್ಪದ ಕಾರಣ ಎರಡು ಕುಟುಂಬಗಳ ನಡುವೆ ಕಾರಣ ಸಬ್ ರಿಜಿಸ್ಟರ್ ಅಫೀಸ್ ಮುಂಭಾಗದಲ್ಲಿಯೇ ಜಗಳ ಶುರುವಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಕುಟುಂಬಸ್ಥರನ್ನು ಸಮಾಧಾನ ಮಾಡಿಸಿ ಸಂಧಾನ ಮಾಡಿಸಿದ್ದಾರೆ. ಕೊನೆಗೆ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಪ್ರೇಮಿಗಳಿಬ್ಬರ ಮದುವೆಯನ್ನು ಪೊಲೀಸರು ಮಾಡಿಸಿದ್ದಾರೆ.

Comments

Leave a Reply

Your email address will not be published. Required fields are marked *