ಯುದ್ಧದ ನಡುವೆ ಬಾಂಬ್ ಶೆಲ್ಟರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಕೀವ್: ಉಕ್ರೇನ್‍ನ ಒಡೆಸಾ ನಗರದ ಬಾಂಬ್ ಶೆಲ್ಟರ್‌ನಲ್ಲಿ ಜೋಡಿಯೊಂದು ವಿವಾಹವಾಗಿದ್ದು, ಮದುವೆಯ ವೇಳೆ ಘಂಟೆ ಬದಲಿಗೆ ವೈಮಾನಿಕ ದಾಳಿಯ ಸೈರನ್ ರಿಂಗಣಿಸಲಾಯಿತು.

ಉಕ್ರೇನ್‍ನ ಕೆಲವು ಭಾಗಗಳಲ್ಲಿ ರಷ್ಯಾ ಪಡೆ ಕ್ಷಿಪಣಿ ದಾಳಿ ಮತ್ತು ಶೆಲ್ ದಾಳಿಯನ್ನು ನಡೆಸುತ್ತಿರುವ ನಡುವೆಯೂ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫೋಟೋದಲ್ಲಿ ವಧು ನಗುತ್ತಾ ಕೈಯಲ್ಲಿ ಹೂವು ಹಿಡಿದುಕೊಂಡಿದ್ದರೆ, ವರ ಡಾಕ್ಯುಮೆಂಟ್‍ಗೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ.

ಬುಧವಾರ ಉಕ್ರೇನಿಯನ್ ಅಧಿಕಾರಿಗಳು ರಷ್ಯಾದ ಸೈನಿಕರು 8ನೇ ದಿನದಂದು ದಕ್ಷಿಣ ನಗರವಾದ ಖೆರ್ಸನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಖೆರ್ಸನ್ ನಗರ ಇದೀಗ ರಷ್ಯಾದ ನಿಯಂತ್ರಣಕ್ಕೆ ಒಳಗಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ

ಉಕ್ರೇನ್‍ನ ಕೆಲವು ಭಾಗಗಳಲ್ಲಿ ಭಾರೀ ಶೆಲ್ ದಾಳಿ, ಬಾಂಬ್ ದಾಳಿ ಮತ್ತು ಸಂಘರ್ಷದ ನಡುವೆ 2,000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‍ನ ರಾಜ್ಯ ತುರ್ತು ಸೇವೆ ತಿಳಿಸಿದೆ. ಇದನ್ನೂ ಓದಿ: ರಷ್ಯಾದ ಯುದ್ಧನೌಕೆಗಳು ಕ್ರೈಮಿಯಾವನ್ನು ಬಿಟ್ಟು ಒಡೆಸ್ಸಾದತ್ತ ಹೋಗುತ್ತಿವೆ: ಅಮೇರಿಕ

Comments

Leave a Reply

Your email address will not be published. Required fields are marked *