ಮಣ್ಣಿಗೆ ಬಿದ್ದರೂ ಜೋಡಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾತ್ರ ಸೂಪರ್!

ನೂರ್- ಸುಲ್ತಾನ್: ಇತ್ತೀಚಿನ ದಿನಗಳಲ್ಲಿ ಪ್ರಿ-ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಗಳು ಕಾಮನ್ ಆಗಿವೆ. ನೆನಪಿನಾಳದಲ್ಲಿ ಉಳಿಯುವಂತಹ ಈ ಫೋಟೋಶೂಟ್ ಗಳನ್ನು ವಿಶೇಷವಾಗಿ ಮಾಡಿಕೊಳ್ಳಬೇಕೆಂಬ ಬಯಕೆ ಪ್ರತಿಯೊಬ್ಬರಿಗೂ ಇದೆ. ಅಂತೆಯೇ ಇಲ್ಲೊಂದು ಜೋಡಿಯ ಫೋಟೋಶೂಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುವಂತೆ ಆಗಿದೆ.

ಹೌದು. ಕಜಕಿಸ್ತಾನದ ಮುರಾಟ್ ಜುರಾಯೆವ್ ಹಾಗೂ ಕಾಮಿಲ್ಲಾ ಜೋಡಿಯೊಂದು ಫೋಟೋಶೂಟ್‍ಗೆಂದು ಹೊರಾಂಗಣಕ್ಕೆ ತೆರಳಿದೆ. ಆದರೆ ಅಲ್ಲಿ ಫಜೀತಿ ನಡೆದರೂ ಅವರ ಫೋಟೋ ಮಾತ್ರ ಸೂಪರ್ ಆಗಿ ಬಂದಿವೆ. ಮುರಾಟ್ ಹಾಗೂ ಕಾಮಿಲ್ಲಾ ಮದುವೆ ಧಿರಿಸಿನಲ್ಲಿಯೇ ಫೋಟೋ ತೆಗೆಸಿಕೊಳ್ಳಬೇಕೆಂದು ಇಚ್ಛಿಸಿದ್ದಾರೆ. ಇದನ್ನೂ ಓದಿ: ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

ಹಿಂದೆ ಪರ್ವತಗಳು ಕಾಣುವಂತೆ ಫೋಟೋಶೂಟ್ ಮಾಡಿಸಿಕೊಳ್ಳಲು ಸುಂದರವಾದ ಜಾಗವನ್ನು ಹುಡುಕಿಕೊಂಡು ತೆರಳಿದ್ದಾರೆ. ಅಂತೆಯೇ ಆ ಸ್ಥಳಕ್ಕೆ ತೆರಳಿ ಇನ್ನೇನು ಫೋಟೋ ಕ್ಲಿಕ್ ಮಾಡಬೇಕೆನ್ನುವಷ್ಟರಲ್ಲಿ ಇಬ್ಬರೂ ಆಕಸ್ಮತ್ತಾಗಿ ಕೆಸರಿಗೆ ಬಿದ್ದಿದ್ದಾರೆ. ಆದರೆ ಫೋಟೋಗ್ರಾಫರ್ ಜೋಡಿಯನ್ನು ರಕ್ಷಿಸಲು ತೆರಳಲಿಲ್ಲ. ಬದಲಾಗಿ ಜೋಡಿ ಕೆಸರಿಗೆ ಬೀಳುತ್ತಿದ್ದಂತೆಯೇ ಹಲವಾರು ರೋಮ್ಯಾಂಟಿಕ್ ರೀತಿಯ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ ಕೆಸರಿನಲ್ಲಿ ಬಿದ್ದರೂ ಜೋಡಿಯ ಫೋಟೋಗಳು ಮಾತ್ರ ಸಖತ್ತಾಗಿ ಬಂದಿವೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್ ಗಳು ಬರುತ್ತಿವೆ. ಅಲ್ಲದೆ ಕ್ಯಾಮೆರಾಮೆನ್ ಕೈಚಳಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Comments

Leave a Reply

Your email address will not be published. Required fields are marked *