ಪ್ಯಾರಾಸೈಲಿಂಗ್ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

ಗಾಂಧಿನಗರ: ಪ್ಯಾರಾಸೈಲಿಂಗ್‍ನಲ್ಲಿ ಹಾರಾಟ ಮಾಡುತ್ತಿದ್ದಾಗ ಹಗ್ಗ ತುಂಡಾಗಿ ದಂಪತಿ ಸಮುದ್ರಕ್ಕೆ ಬಿದ್ದ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗುಜರಾತ್ ಮೂಲದ ಅಜಿತ್ ಕಥಾಡ್ ಮತ್ತು ಸರಳಾ ಕಥಾಡ್ ದಂಪತಿ ದಿಯುನಲ್ಲಿರುವ ನಗೋವಾ ಬೀಚ್‍ನಲ್ಲಿ ವಾರಾಂತ್ಯದ ದಿನವನ್ನು ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ಪ್ಯಾರಾಸೈಲಿಂಗ್‍ನಲ್ಲಿ ಹಾರಾಟ ಮಾಡಬೇಕೆಂದೆನಿಸಿದೆ. ಅದರಂತೆ ಇಬ್ಬರು ಕೂಡ ಪ್ಯಾರಾಸೈಲಿಂಗ್‍ನಲ್ಲಿ ಹಾರಾಡುತ್ತಿದ್ದಂತೆ ಏಕಾಏಕಿ ಅದರ ಹಗ್ಗ ತುಂಡಾಗಿದೆ. ಹಗ್ಗ ತುಂಡಾಗುತ್ತಿದ್ದಂತೆ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಬೀದಿಬದಿ ಮಾಂಸಾಹಾರ ಮಾರಾಟಕ್ಕೆ ನಿರ್ಬಂಧ: ಗುಜರಾತ್‌ ಸಿಎಂ ಸಮರ್ಥನೆ

ಸಮುದ್ರಕ್ಕೆ ಬಿದ್ದೊಡನೆ ಅವರು ಧರಿಸಿದ್ದ ಲೈಫ್ ಜಾಕೆಟ್‍ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ದಂಪತಿ ಪ್ಯಾರಾಸೈಲಿಂಗ್‍ನಲ್ಲಿ ಹಾರಾಡುತ್ತಾ ತುಂಬಾ ಎತ್ತರವೇರಿದ್ದಾರೆ. ನೋಡ ನೋಡುತ್ತಿದ್ದಂತೆ ಹಗ್ಗ ಕಟ್ ಆಗಿದೆ. ದಂಪತಿ ಸಹಾಯಕ್ಕಾಗಿ ಕಿರುಚುತ್ತಿದ್ದು, ಕೂಡಲೇ ಅಲ್ಲಿದ್ದ ರಕ್ಷಕರು ಅವರಿಬ್ಬರನ್ನು ಕೂಡ ರಕ್ಷಿಸಿದ್ದಾರೆ. ಇದನ್ನೂ ಓದಿ: ಸ್ನಾನಕ್ಕೆ ನದಿಗಿಳಿದು ಅಪಾಯಕ್ಕೆ ಸಿಲುಕಿದ ವ್ಯಕ್ತಿ ಬದುಕುಳಿದಿದ್ದೆ ರೋಚಕ

Comments

Leave a Reply

Your email address will not be published. Required fields are marked *