ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆ ಪ್ರಕರಣ- ಇಬ್ಬರ ಕೋವಿಡ್ ವರದಿ ನೆಗೆಟಿವ್

– ಪೋಸ್ಟ್ ಮಾರ್ಟಮ್‍ಗೂ ಮುನ್ನ ಕೊರೊನಾ ಟೆಸ್ಟ್

ಮಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆ ಆರೋಗ್ಯ ಸ್ಥಿತಿಗಂಭೀರವಾಗಿದೆ ಎಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಕುರಿತು ಸಾಕಷ್ಟು ಚರ್ಚೆ ಸಹ ನಡೆಯುತ್ತಿದೆ. ಆದರೆ ಪೋಸ್ಟ್ ಮಾರ್ಟಮ್‍ಗೂ ಮುನ್ನ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ.

ಪೋಸ್ಟ್ ಮಾರ್ಟಮ್‍ಗೂ ಮುನ್ನ ನಡೆಸಿದ ಮೃತದೇಹದ ಕೋವಿಡ್ ಟೆಸ್ಟ್ ನಲ್ಲಿ ರಿಪೋರ್ಟ್ ನೆಗೆಟಿವ್ ಬಂದಿದೆ. ರಿಪೋರ್ಟ್ ನೆಗೆಟಿವ್ ಬೆನ್ನಲ್ಲೇ ಮೃತದೇಹದ ಪೋಸ್ಟ್ ಮಾರ್ಟಮ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೋವಿಡ್ ಬಂದಿದೆ ಎಂಬ ಅತಂಕದಲ್ಲಿ ರಮೇಶ್ ಮತ್ತು ಗುಣ ದಂಪತಿ ನೇಣಿಗೆ ಶರಣಾಗಿದ್ದರು. ಮಂಗಳೂರು ಹೊರವಲಯದ ಕುಳಾಯಿಯ ರೆಹೆಜಾ ಅಪಾರ್ಟ್‍ಮೆಂಟ್ ನಲ್ಲಿ ಘಟನೆ ನಡೆದಿತ್ತು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಪತ್ನಿ ಗುಣ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕೊರೊನಾದಿಂದ ಆರೋಗ್ಯ ಸ್ಥಿತಿ ಗಂಭೀರ- ದಂಪತಿ ಆತ್ಮಹತ್ಯೆ

ಚಿತ್ರಾಪುರದ ಫ್ಲ್ಯಾಟ್ ನಲ್ಲಿ ದಂಪತಿ ವಾಸವಿದ್ದರು. ಒಂದು ವಾರದಿಂದ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ನಿರ್ಧಾರಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಮೇಶ್ ಪೊಲೀಸ್ ಕಮೀಷನರ್, ಹಿಂದೂ ಸಂಘಟನೆ ಮುಖಂಡರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಬಳಿಕ ಶರಣ್ ಪಂಪ್ವೆಲ್, ಸತ್ಯಜಿತ್ ಸುರತ್ಕಲ್ ಗೂ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಇದನ್ನೂ ಓದಿ: 50 ರೂ.ಗಾಗಿ ನಡೆಯಿತು ಕೊಲೆ- ಆರೋಪಿ ಅರೆಸ್ಟ್

ಅಂತ್ಯಕ್ರಿಯೆ ಮಾಡುವಂತೆ ವಾಯ್ಸ್ ಮೆಸೇಜ್‍ನಲ್ಲಿ ಮನವಿ ಮಾಡಿದ್ದು, ಅಂತ್ಯಕ್ರಿಯೆಗಾಗಿ ಒಂದು ಲಕ್ಷ ರೂಪಾಯಿ ಇಟ್ಟಿರುವುದಾಗಿ ಹೇಳಿದ್ದಾರೆ. ಅಲ್ಲದೆ ಮನೆಯ ಉಪಕರಣ ಮಾರಿ ಬಡವರಿಗೆ ನೀಡುವಂತೆ ಮನವಿ ಮಾಡಿದ್ದಾರೆ. ವಾಯ್ಸ್ ಮೆಸೇಜ್ ಬಂದ ತಕ್ಷಣ ಪೊಲೀಸ್ ಕಮೀಷನರ್ ಅಡ್ರೆಸ್ ಟ್ರ್ಯಾಕ್ ಮಾಡಿದ್ದು, ಪೊಲೀಸರು ಮನೆ ತಲುಪುವ ವೇಳೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *