ಶೋಕಿಯಿಂದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

ಬೆಂಗಳೂರು: ‌ಶ್ರೀಮಂತರ ರೀತಿಯಲ್ಲೇ ಶೋಕಿಯಿಂದ ಬಂದು, ಚಿನ್ನ ಖರೀದಿಸಿ ವಂಚಿಸುತ್ತಿದ್ದ ಖತರ್ನಾಕ್‌ ಜೋಡಿಯೊಂದನ್ನು ಬ್ಯಾಡರಹಳ್ಳಿ ಪೊಲೀಸರು (Byadarahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು. ಶ್ರೀಮಂತರಂತೆ ಟಿಪ್‌ಟಾಪ್‌ ಆಗಿ ಚಿನ್ನದ ಅಂಗಡಿಗೆ ಬಂದ ಜೋಡಿ, ಚಿನ್ನ ಖರೀದಿಸೋದ್ರಲ್ಲೇ (Gold Purchase) ಬ್ಯುಸಿಯಾಗಿರುತ್ತಿತ್ತು. ಅಂಗಡಿ ಮಾಲೀಕರು ಈ ಜೋಡಿ ಕೇಳಿದ್ದನ್ನೆಲ್ಲಾ ಕೊಡುತ್ತಿದ್ದರು. ಒಳ್ಳೆಯ ವ್ಯಾಪಾರ ಆಗ್ತಿತ್ತು ಅಂದುಕೊಳ್ಳುತ್ತಿದ್ದ ಚಿನ್ನದಂಗಡಿ ಮಾಲೀಕನ ಖುಷಿ ಇರುತ್ತಿದ್ದದ್ದು ಕೇವಲ ಅರ್ಧಗಂಟೆ ಮಾತ್ರ. ಈ ಜೋಡಿ ಶಾಪಿಂಗ್‌ ಮಾಡ್ತಿದ್ದ ರೀತಿ ನೋಡಿ, ಅಂಗಡಿ ಮಾಲೀಕರೇ ಬೆಚ್ಚಿ ಬೀಳುತ್ತಿದ್ದರು. ಇಂತಹ ಜೋಡಿ ತಗಲಾಕ್ಕೊಂಡಿದ್ದು ಹೇಗೆ ಅನ್ನೋ ಸ್ಟೋರಿ ಇಲ್ಲಿದೆ.

ಡಿಜಿಟಲ್‌ ಪೇಮೆಂಟ್‌ ಆ್ಯಪ್‌ಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈ ಜೋಡಿ, ಫೇಕ್‌ ಪೇಮೆಂಟ್‌ ಆ್ಯಪ್‌ ( Fake Payment App) ಮೂಲಕ ಹಣ ಪಾವತಿ ಮಾಡಿರುವುದಾಗಿ ತೋರಿಸಿ, ವಂಚಿಸುತ್ತಿದ್ದರು. ಅದೇ ರೀತಿ ಬ್ಯಾಡರಹಳ್ಳಿ ವ್ಯಾಪ್ತಿಯ ಆಭರಣದ ಅಂಗಡಿಯಲ್ಲೂ ಅದೇ ರೀತಿ ನಾಟಕ ಮಾಡಿ ಎಸ್ಕೇಪ್‌ ಆಗಿದ್ದರು. 15 ದಿನಗಳ ಬಳಿಕ ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ

ಹೇಗಿದೆ ನೋಡಿ ಥ್ರಿಲ್ಲಿಂಗ್‌ ಸ್ಟೋರಿ:
15 ದಿನದ ಹಿಂದೆ ಗೊಲ್ಲರಹಟ್ಟಿಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್ ಅಂಡ್‌ ಜ್ಯೂವೆಲರ್ಸ್‌ ಆಭರಣ ಅಂಗಡಿಗೆ ಈ ಜೋಡಿ ಬಂದಿತ್ತು. 1.65 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿ ಮಾಡಿದ್ದಾರೆ. ಬಳಿಕ ಆನ್‌ಲೈನ್‌ ಮೂಲಕ ಹಣ ಪಾವತಿಸಿ ಹೊರಟಿದ್ದಾರೆ. ಹಣ ಪಾವತಿಸಿದ ಸಂದೇಶವನ್ನು ಮಾಲೀಕರಿಗೆ ತೋರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅಂಗಡಿ ಮಾಲೀಕ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸಾವು – ಪಿಎಸ್‌ಐ ಸಸ್ಪೆಂಡ್

ಘಟನೆ ಸಂಬಂಧ ಅಂಗಡಿ ಮಾಲೀಕ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರತು ತನಿಖೆ ಆರಂಭಿಸಿದ್ದ ಪೊಲೀಸರು 15 ದಿನಗಳ ಬಳಿಕ ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 1.30 ಲಕ್ಷ ಚಿನ್ನ ಅಡಮಾನ ಇಟ್ಟಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಇದೇ ರೀತಿ ಹಲವು ಚಿನ್ನದ ಅಂಗಡಿಗಳಲ್ಲಿ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.