ವಿನಯ್ ಗುರೂಜಿಯನ್ನು ಭೇಟಿಯಾಗಲು ಹಂಬಲಿಸುತ್ತಿದ್ದಾರೆ ದೇಶದ ಪ್ರಭಾವಿ ಗಣ್ಯರು!

ಬೆಂಗಳೂರು: ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ಹೇಳಿದ್ದ ಅವಧೂತ ವಿನಯ್ ಗುರೂಜಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಸ್ಪೀಕರ್ ರಮೇಶ್ ಕುಮಾರ್ ಕೈಯಿಂದ ಪಾದಪೂಜೆ ಮಾಡಿಸಿಕೊಂಡ ವಿನಯ್ ಗುರೂಜಿ ಭವಿಷ್ಯವಾಣಿ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದ್ಯಾಂತ ಸ್ವಾಮೀಜಿಯ ಭವಿಷ್ಯವಾಣಿ ಸಂಚಲನ ಮೂಡಿಸಿದೆ.

ಗುರೂಜಿ ಭೇಟಿಗಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೂಡ ಹಂಬಲಿಸುತ್ತಿದ್ದಾರೆ. ಮುಂದಿನ ಲೋಕಸಭಾ ಎಲೆಕ್ಷನ್ ಕುರಿತಾಗಿ ಗುರೂಜಿಯ ಭೇಟಿಗಾಗಿ ಚಂದ್ರಬಾಬು ನಾಯ್ಡು ಎಷ್ಟೇ ಪ್ರಯತ್ನ ಪಟ್ಟರೂ ಸ್ವಾಮೀಜಿ ಸಿಗುತ್ತಿಲ್ಲ.

ಇನ್ನು ಕೇಂದ್ರದ ಕೆಲ ನಾಯಕರು ಕೂಡ ಸ್ವಾಮೀಜಿ ಭೇಟಿಗಾಗಿ ಕರೆಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ದೇವೇಗೌಡರ ಮುಖಾಂತರ ಸ್ವಾಮೀಜಿ ಭೇಟಿಗೆ ಎಡೆತಾಕಿದ್ದಾರಂತೆ. ಆದರೆ ಈ ಮುಖಂಡರ ಕರೆಯಿಂದ ಕಿರಿಕಿರಿಯಾಗಿ ವಿನಯ್ ಗುರೂಜಿ ಆರು ತಿಂಗಳು ಮೌನ ವೃತಕ್ಕೆ ನಿರ್ಧಾರ ಮಾಡಿದ್ದಾರೆ ಅಂತಾ ಅವರ ಆಪ್ತವಲಯದ ಮಾತುಗಳು ಕೇಳಿ ಬರುತ್ತಿದೆ.

ಆರು ತಿಂಗಳು ಯಾರ ಕೈಗೂ ಸಿಗದೆ ಮಠದ ಗುಹೆಯೊಳಗೆ ವೃತದಲ್ಲಿ ತೊಡಗಿಕೊಂಡು ಅಜ್ಞಾತವಾಸಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕಾಪುರ ದತ್ತಾಶ್ರಮದ ಅವಧೂತ 27 ವಯಸ್ಸಿನ ವಿನಯ್ ಗುರೂಜಿ ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಗುರೂಜಿ ಇದೀಗ ಮೌನ ವ್ರತಕ್ಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *