ತನ್ನ ಸಮಸ್ತ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ 78ರ ಮಹಿಳೆ

RAHUL

ಡೆಹ್ರಾಡೂನ್: ಉತ್ತರಾಖಂಡ್ ಡೆಹ್ರಾಡೂನ್‌ನ 78 ವರ್ಷದ ಮಹಿಳೆಯೊಬ್ಬರು ತನ್ನ 50 ಲಕ್ಷ ಮೌಲ್ಯದ ಆಸ್ತಿ ಮತ್ತು 10 ತೊಲ ಚಿನ್ನ ಸೇರಿದಂತೆ ತನ್ನ ಸಮಸ್ತ ಆಸ್ತಿಯನ್ನು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೆಸರಿಗೆ ಬರೆದಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ.

ಪುಷ್ಪಾ ಮುಂಜಿಯಾಲ್ ಅವರು ಡೆಹ್ರಾಡೂನ್ ನ್ಯಾಯಾಲಯದಲ್ಲಿ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯ ಮಾಲೀಕತ್ವದ ಶೀರ್ಷಿಕೆಯನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ವಿಚಾರಗಳು ದೇಶಕ್ಕೆ ಅಗತ್ಯ ಎಂದು ಪುಷ್ಪಾ ಮುಂಜಿಯಾಲ್ ಬಣ್ಣಿಸಿದ್ದಾರೆ. ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ, ಅದಕ್ಕಾಗಿಯೇ ನನ್ನ ಅಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಪ್ರಧಾನ ಮಂತ್ರಿ ಜನ್ ಧನ್ ಲೂಟ್ ಯೋಜನೆಯ ಭಾಗ: ರಾಹುಲ್ ಗಾಂಧಿ

RAHUL GANDHI

ಕಾಂಗ್ರೆಸ್ ಮುಖಂಡ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ಪುಷ್ಪಾ ಮುಂಜಿಯಲ್ ಅವರು ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಲಾಲ್‌ಚಂದ್ ಶರ್ಮಾ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *