ಬೆಂಗಳೂರು: ಹೊಸ ವರ್ಷದ ಸಂಭ್ರಮೋತ್ಸವ (New Year Celebration) ಕ್ಕೆ ಬೆಂಗಳೂರು ನಗರ ಸಜ್ಜಾಗಿದೆ. ಕೊರೊನಾ (Corona Virus) ದಿಂದ ಲಾಕ್ ಡೌನ್ (Lockdown) ಬಳಿಕ ಬಂದಿರುವ ಹೊಸ ವರ್ಷಕ್ಕೆ ಬ್ರಿಗೇಡ್ ರೋಡ್ (Brigade Road) ಸೇರಿದಂತೆ ಪಾರ್ಟಿ ಸ್ಥಳಗಳು ಝಗಮಗಿಸ್ತಿದ್ದು, ಪೊಲೀಸರು ಇಡೀ ಬೆಂಗಳೂರನ್ನ ಸುಪರ್ದಿಗೆ ಪಡೆದಿದ್ದಾರೆ.

ಹೊಸ ವರ್ಷಕ್ಕಿದ್ದ ಆತಂಕ ದೂರಾಗಿದ್ದು, ಸೆಲೆಬ್ರೇಷನ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಇಂದು ಸಂಜೆಯಿಂದಲೇ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಸೇರಿ ಹಲವು ಭಾಗಗಳಲ್ಲಿ ಬಿಗ್ ಸೆಲೆಬ್ರೇಷನ್‍ಗೆ ಯುವ ಸಮೂಹದ ದಂಡೇ ಸೇರುತ್ತೆ. ಸಾವಿರಾರು ಜನ ಬರುವ ನಿರೀಕ್ಷೆ ಹಿನ್ನೆಲೆ, ಪೊಲೀಸ್ ಇಲಾಖೆ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಅದ್ಧೂರಿ ಸಂಭ್ರಮಾಚರಣೆಗೆ ನಮ್ಮ ಬೆಂಗಳೂರು ಸಜ್ಜಾಗಿದ್ದು, ಬ್ರಿಗೇಡ್ ರೋಡ್ ಅಂತೂ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೂಲ್ಸ್ & ರೆಗ್ಯುಲೇಷನ್ ಬಿಡುಗಡೆ ಮಾಡಿದ್ದು, ಪೊಲೀಸರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: JDS ಜೊತೆ ಒಳ ಮೈತ್ರಿ, ಸಾಫ್ಟ್ ಕಾರ್ನರ್ ಬೇಡ – ಬಿಜೆಪಿ ನಾಯಕರಿಗೆ ಅಮಿತ್ ಶಾ ತಾಕೀತು

ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ: ಇಂದು ಸಂಜೆಯಿಂದಲೇ ನಗರದಾದ್ಯಂತ 8500 ಪೊಲೀಸರ ನಿಯೋಜನೆ ಮಾಡಲಾಗಿದೆ. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ನಗರದೆಲ್ಲೆಡೆ 4,000 ಸಿಸಿಟಿವಿ (CCTV) ಅಳವಡಿಸಲಾಗಿದೆ. ಮಹಿಳೆಯರು, ಮಕ್ಕಳ ಸುರಕ್ಷತೆಗಾಗಿ ವಾಚ್ ಟವರ್‍ಗಳ ನಿರ್ಮಾಣ ಮಾಡಲಾಗಿದೆ. ರಾತ್ರಿ 9ರ ನಂತ್ರ ಏರ್‌ಪೋರ್ಟ್ ಫ್ಲೈ ಓವರ್ ಹೊರತುಪಡಿಸಿ ಎಲ್ಲಾ ಫ್ಲೈಓವರ್‍ಗಳು ಬಂದ್ ಆಗಲಿದೆ. ರಾತ್ರಿ 9ರ ಬಳಿಕ ನೈಸ್ ರೋಡ್‍ನಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಡ್ರ್ಯಾಗ್ ರೇಸ್, ವ್ಹೀಲಿಂಗ್ ಬಗ್ಗೆ ನಿಗಾ ವಹಿಸಲಾಗಿದೆ.

ರಾತ್ರಿ 1 ಗಂಟೆಯವರೆಗೆ ಸೆಲೆಬ್ರೇಷನ್‍ಗೆ ಅವಕಾಶ ನೀಡಲಾಗಿದ್ದು, ಇಡೀ ರಾತ್ರಿ ಡ್ರಿಂಕ್ & ಡ್ರೈವ್ ತಪಾಸಣೆ ನಡೆಸಲಾಗುತ್ತಿದೆ. ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆಯಲ್ಲಿ ವಾಹನಗಳ ಓಡಾಟ ಬಂದ್ ಆಗಲಿದೆ. ಇನ್ನು ಪಬ್‍ಗಳಲ್ಲಿ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು 2023 ಸ್ವಾಗತಿಸಲು ಇಡೀ ಬೆಂಗಳೂರೇ ಸಜ್ಜಾಗಿದೆ. ಸಿಲಿಕಾನ್ ಸಿಟಿಯ ಪಬ್‍ಗಳು ಗ್ರಾಹಕರನ್ನ ಆಕರ್ಷಿಸುತ್ತಿವೆ. ಕಳೆದೆರಡು ವರ್ಷವೂ ಕೋವಿಡ್ ವರ್ಷಾಚರಣೆಗೆ ಹೊಡೆತ ಕೊಟ್ಟಿತ್ತು. ಈ ಬಾರಿಯೂ ಮತ್ತೆ ಕೊರೋನಾ ಕಾಟ ಶುರುವಾಗಿದ್ರೂ ವ್ಯಾಪಾರ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಪೊಲೀಸ್ ಇಲಾಖೆ ಪಬ್-ಬಾರ್ & ರೆಸ್ಟೊರೆಂಟ್‍ಗಳಿಗೆ ಪ್ರತ್ಯೇಕ ನಿಯಮಗಳನ್ನ ಜಾರಿಗೊಳಿಸಿದೆ.

ಹೀಗೆ ಪೊಲೀಸ್ ಇಲಾಖೆ ರೂಲ್ಸ್ ರೆಗ್ಯುಲೇಶನ್ ಜಾರಿಗೊಳಿಸಿ ಹೊಸ ವರ್ಷ ಆಚರಿಸಿ ಅಂತಿದೆ. ಪಬ್, ಬಾರ್, ರೆಸ್ಟೋರೆಂಟ್‍ಗಳೂ ಕೊರೋನಾ ನಿಯಮ ಪಾಲಿಸಿ ಹೊಸ ವರ್ಷವನ್ನ ಸ್ವಾಗತಿಸಲು ಸಜ್ಜಾಗಿವೆ.

Leave a Reply