ಸಿಲಿಕಾನ್ ಸಿಟಿಲಿ ಮರುಕಳಿಸಲಿದೆ ಇತಿಹಾಸ – ಮಧ್ಯರಾತ್ರಿಯಿಂದ ಹೂವಿನ ಕರಗ

– ಧರ್ಮರಾಯ ದೇಗಲದ ಬಳಿ ಭಕ್ತರ ದಂಡು

ಬೆಂಗಳೂರು: ಬೆಂಗಳೂರಿನಲ್ಲಿ ಈಗ ಕರಗದ ಸಂಭ್ರಮ. ಸಿಲಿಕಾನ್ ಸಿಟಿ ವಿಶ್ವದ ಹೈ-ಫೈ ಸಿಟಿಯಲ್ಲಿ ಒಂದೆನಿಸಿಕೊಂಡಿದ್ದರು ನಮ್ಮ ಸಂಸ್ಕøತಿಯ ತಾಯಿ ಬೇರನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ.

ಗಾರ್ಡನ್ ಸಿಟಿಯ ಐತಿಹಾಸಿಕ ಉತ್ಸವಗಳಲ್ಲಿ ಕರಗ ಸಹ ಒಂದಾಗಿದೆ. ಈ ದಿನ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ದ್ರೌಪದಿಯೇ ಧರೆಗಿಳಿಯುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೌದು, ವಿಶ್ವ ವಿಖ್ಯಾತ ಬೆಂಗಳೂರು ಕರಗಕ್ಕೆ ಕೌಂಟ್ ಡೌನ್ ಶುರುವಾಗಿದೆ. ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯ ನವವಧುವಿನಂತೆ ಸಿಂಗಾರಗೊಂಡಿದ್ದು, ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ.

ಬೆಳ್ಳಿಗ್ಗೆಯಿಂದಲೇ ಪೂಜೆಯಲ್ಲಿ ನಿರತರಾಗಿರುವ ಅರ್ಚಕ ಮನು ನಾಗರಾಜ್, ಇಂದು ಮಧ್ಯರಾತ್ರಿ 12:30ಕ್ಕೆ ಹೂವಿನ ಕರಗ ಹೊತ್ತು ದೇವಾಲಯದಿಂದ ಹೊರಡಲಿದ್ದಾರೆ. ಅವೆನ್ಯೂ ರಸ್ತೆಯಿಂದ ಆರಂಭವಾಗಲಿರುವ ಕರಗದ ಮೆರವಣಿಗೆ, ಕಬ್ಬನ್ ಪಾರ್ಕ್‍ನ ಆಂಜನೇಯ ದೇವಾಲಯ, ಸಿದ್ದಣ್ಣ ಗಲ್ಲಿಯಿಂದ ಅವೆನ್ಯು ರಸ್ತೆ ಮಾರ್ಗವಾಗಿ ಕೆ.ಆರ್. ಮಾರುಕಟ್ಟೆ ಮೂಲಕ ಬೆಳಗಿನ ಜಾವ 6 ಗಂಟೆಗೆ ಮತ್ತೆ ದೇವಾಲಯ ತಲುಪಲಿದೆ. ಈ ಬಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಟನ್‍ಪೇಟೆ ಬದಲು ಅಕ್ಕಿಪೇಟೆ ಮಾರ್ಗವಾಗಿ ಹೂವಿನ ಕರಗ ತೆರಳಲಿದೆ. ಈ ಕ್ಷಣಕ್ಕೆ ಲಕ್ಷಾಂತರ ಜನ ಸಾಕ್ಷಿಯಾಗಲಿದ್ದಾರೆ.

Comments

Leave a Reply

Your email address will not be published. Required fields are marked *