ಕೊರೊನಾ ಮಾಂಸಾಹಾರಿಗಳನ್ನು ಶಿಕ್ಷಿಸಲು ಬಂದಿರೋ ‘ಅವತಾರ’: ಹಿಂದೂ ಮಹಾಸಭಾ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸದ್ಯ ಪ್ರಚಲಿತದಲ್ಲಿರೋ ಕಾಯಿಲೆಯಾಗಿದೆ. ಈ ಕಾಯಿಲೆಗೆ ಔಷಧಿ ಕಂಡುಹುಡುಕಲು ಮೆಡಿಕಲ್ ಆಫೀಸರ್ಸ್ ಭಾರೀ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಇತ್ತ ಹಿಂದೂ ಮಹಾಸಭಾ ಮಾತ್ರ ಮಾಂಸಾಹಾರಿಗಳನ್ನು ಶಿಕ್ಷಿಸಲು ಬಂದಿರುವ ‘ಅವತಾರ’ ಎಂದು ಹೇಳುತ್ತಿದೆ.

ಕೊರೊನಾ ವೈರಸ್ ಎಂಬುದು ಬರೀ ವೈರಸ್ ಅಲ್ಲ, ಅದು ಬಡಜೀವಗಳ ರಕ್ಷಣೆಗಾಗಿ ಬಂದಿರುವ ಒಂದು ಅವತಾರವಾಗಿದೆ. ಹೀಗಾಗಿ ಅವುಗಳು ಸಾವಿನ ಮೂಲಕ ನಿಮಗೆ ಸಂದೇಶವೊಂದನ್ನು ನೀಡುತ್ತವೆ. ಒಟ್ಟಿನಲ್ಲಿ ಯಾರೆಲ್ಲ ಮಾಂಸಾಹಾರ ಮಾಡುತ್ತಾರೆ ಅವರಿಗೆ ಶಿಕ್ಷೆ ನೀಡಲು ಬಂದಿರುವಂತಹ ಕಾಯಿಲೆಯಾಗಿದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ತಿಳಿಸಿದ್ದಾರೆ.

ಇದೇ ವೇಳೆ ಚೀನಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಬಗ್ಗೆ ಮಾತನಾಡುತ್ತಾ, ಪ್ರಾಣಿಗಳನ್ನು ಹಿಂಸಿಸಿದ್ದಕ್ಕಾಗಿ ಚೀನಾದವರಿಗೆ ಈ ವೈರಸ್ ಪಾಠ ಕಲಿಸಿದೆ. ಹೀಗಾಗಿ ಇನ್ನು ಮುಂದೆಯಾದರೂ ಅವರು ಮಾಂಸಾಹಾರ ಬಿಟ್ಟು ಸಸ್ಯಹಾರಿಗಳಾಗಬೇಕು ಎಂದು ಚಕ್ರಪಾಣಿ ವಿವರಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,770ಕ್ಕೆ ಏರಿಕೆ

ಅಲ್ಲದೆ ಚೀನಾ ಅಧ್ಯಕ್ಷರಿಗೂ ಚಕ್ರಪಾಣಿ ಸಲಹೆಯೊಂದನ್ನು ನೀಡಿದ್ದಾರೆ. ಕೊರೊನಾ ವೈರಸ್ ಮೂರ್ತಿಯನ್ನು ಪ್ರತಿಷ್ಠಾಪಿಸಿ. ಈ ಮೂಲಕ ಜನರು ಮಾಂಸಾಹಾರ ತಿನ್ನುವುದನ್ನು ಮರೆತು ಬಿಡುವಂತೆ ಮಾಡಿ. ಒಟ್ಟಿನಲ್ಲಿ ಅವರನ್ನು ಸಸ್ಯಹಾರಿಗಳನ್ನಾಗಿ ಪರಿವರ್ತಿಸಲು ಸಲಹೆಯಿತ್ತಿದ್ದಾರೆ.

ಚೀನಾದ ಜನ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಅಲ್ಲದೆ ಅತಿ ಸೂಕ್ಷ್ಮ ಜೀವಿಗಳ ಜೀವಕ್ಕೆ ಹಾನಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಹೀಗೆ ಮಾಡಿದ್ದಲ್ಲಿ ಮಾತ್ರ ಕೊರೊನಾ ವೈರಸ್ ತನ್ನ ‘ಅವತಾರ’ವನ್ನು ಕಡಿಮೆ ಮಾಡಿಕೊಳ್ಳಬಹುದು. ಇಷ್ಟು ಮಾತ್ರವಲ್ಲದೆ, ದೇವರನ್ನು ಪೂಜಿಸುವ ಹಾಗೂ ಗೋ ರಕ್ಷಣೆಯಲ್ಲಿ ನಂಬಿಕೆ ಹೊಂದಿರುವ ಭಾರತೀಯರು ಕೊರೊನಾ ವೈರಸ್ ನಿಂದ ಭಯಪಡುವ ಅಗತ್ಯವಿಲ್ಲ. ಯಾಕಂದ್ರೆ ಅವರಲ್ಲಿ ರಕ್ಷಣೆ ಪಡೆಯುವ ಶಕ್ತಿ ಹೆಚ್ಚಿದೆ ಎಂದು ಚಕ್ರಪಾಣಿ ಭಾರತೀಯರಿಗೆ ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೊನಾ?

 

Comments

Leave a Reply

Your email address will not be published. Required fields are marked *