– ಹಂತ ಹಂತವಾಗಿ ಲಾಕ್‍ಡೌನ್ ಸಡಿಲ
ಮಂಡ್ಯ: ದೇಶದಲ್ಲಿ ತಲ್ಲಣವನ್ನೇ ಸೃಷ್ಟಿಸಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಪ್ರಕರಣ ಈಗ ಮಂಡ್ಯ ಜಿಲ್ಲೆಯ ಮಳವಳ್ಳಿಯ ಜನರಲ್ಲೂ ಆತಂಕ ಉಂಟುಮಾಡಿದೆ.
ದೆಹಲಿಯ ನಿಜಾಮುದ್ದೀನ್ ಧರ್ಮಸಭೆಗೂ ಮುನ್ನ ಮಳವಳ್ಳಿಗೆ ಧರ್ಮಗುರು ಭೇಟಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಧರ್ಮಗುರುವಿನ ಜೊತೆ ಸಂಪರ್ಕದಲ್ಲಿದ್ದವರ ಹುಡುಕಾಟವನ್ನು ಮಾಡಲಾಗುತ್ತಿದೆ. ಧರ್ಮಗುರು ಮಳವಳ್ಳಿಯಲ್ಲಿ ಕೆಲವು ದಿನಗಳ ಕಾಲ ವಾಸವಿದ್ದ ಬಗ್ಗೆ ಮಾಹಿತಿ ಇದೆ. ಮಾಹಿತಿ ಆಧರಿಸಿ ವಾಸವಿದ್ದ ಆ ಕುಟುಂಬದ ಸದಸ್ಯರಿಗಾಗಿ ಹುಡುಕಾಟ ನಡೆಯುತ್ತಿದೆ.

ಧರ್ಮಗುರು ಮೈಸೂರಿನಲ್ಲಿ ನೆಲೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರ ಸಂಪರ್ಕದಲ್ಲಿದ್ದವರನ್ನ ಹುಡುಕಾಟ ಮಾಡುತ್ತಿದ್ದೀವಿ. ಸದ್ಯಕ್ಕೆ ಅಧಿಕಾರಿಗಳು ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲಿರುವ ಮುಸ್ಲಿಂ ಬ್ಲಾಕ್‍ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಇತ್ತ ಮಂಡ್ಯದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಗೊಳಿಸುತ್ತಿದೆ. ಇಂದಿನಿಂದ ಸೆಲೂನ್, ಬೇಕರಿ ತೆರೆಯಲು ಡಿಸಿ ಡಾ.ಎಂ.ವಿ.ವೆಂಕಟೇಶ್ ಅನುಮತಿ ನೀಡಿದ್ದಾರೆ. ಆದರೆ ಕೆಲವು ಷರತ್ತು ವಿಧಿಸಿ ಅನುಮತಿ ನೀಡಿದ್ದಾರೆ. ಸೆಲೂನ್, ಬೇಕರಿ ಮಾಲೀಕರ ಮನವಿಗೆ ಸ್ಪಂದಿಸಿ ಅನುಮತಿ ನೀಡಿದ್ದೇನೆ. ಆದರೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಬಳಸುವಂತೆ ಸೂಚನೆ ನೀಡಿದ್ದೇನೆ. ಯಾಕೆಂದರೆ ಮುಂಜಾಗೃತೆ ವಹಿಸದಿದ್ದರೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಡಿಸಿ ತಿಳಿಸಿದ್ದಾರೆ.

ಇತ್ತ ಮೈಸೂರು ಜಿಲ್ಲೆಯಲ್ಲಿ ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆಯಲ್ಲಿ ಸೆಲೂನ್, ಬೇಕರಿ ತೆರೆಯಲು ಅನುಮತಿ ಕೊಟ್ಟಿದ್ದಕ್ಕೆ ಕೆಲವು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋಳಿ, ಕುರಿ, ಮೇಕೆ, ಮೀನು ಮಾಂಸ ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗಿದೆ.

Leave a Reply