ಕೊರೊನಾಗೆ ಹೆದರಿದ ಕೈದಿಗಳು – ತಪಾಸಣೆ ಮಾಡುವಂತೆ ಆಗ್ರಹಿಸಿ ಉಪವಾಸ

ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವವನ್ನೇ ಭಯಪಡಿಸಿದೆ. ಇದೀಗ ಜೈಲಿನಲ್ಲಿರುವ ಕೈದಿಗಳು ಕೂಡ ತಮಗೆಲ್ಲಿ ಕೊರೊನಾ ಬರುತ್ತೋ ಅಂತ ಹೆದರಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಪ್ರತಿದಿನ ಬರುವ ವಿಚಾರಾಣಾಧೀನ ಕೈದಿಗಳನ್ನು ತಪಾಸಣೆ ಮಾಡಿ ನಂತರ ಕಾರಾಗೃಹಕ್ಕೆ ಎಂಟ್ರಿ ನೀಡಬೇಕು. ಅಲ್ಲದೇ ಬ್ಯಾರಕ್‍ಗಳಲ್ಲಿ ಮಿತಿಗಿಂತ ಹೆಚ್ಚಿರುವ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಉಪವಾಸ ಸತ್ಯಾಗ್ರಹ ಮಾಡಿ ಪ್ರತಿಭಟಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡದಿದೆ.

ದಿನನಿತ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸುಮಾರು 60ಕ್ಕೂ ಹೆಚ್ಚು ವಿಚಾರಾಣಾಧೀನ ಕೈದಿಗಳು ಆಗಮಿಸುತ್ತಿದ್ದಾರೆ. ಇವರಿಗೆ ಯಾವುದೇ ತಪಾಸಣೆ ಮಾಡದೆ ಜೈಲಿಗೆ ಎಂಟ್ರಿ ನೀಡುತ್ತಿದ್ದಾರೆ. ಇದರಿಂದ ಕೊರೊನಾ ವೈರಸ್ ತಮಗೂ ಹರಡಬಹುದು ಎಂದು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ತಿಂಡಿ ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜೊತೆಗೆ ಒಂದೊಂದು ಬ್ಯಾರಕ್‍ನಲ್ಲಿ 80ಕ್ಕೂ ಹೆಚ್ಚು ಕೈದಿಗಳು ಇದ್ದಾರೆ. ಹೀಗಾಗಿ ಮಿತಿಗಿಂತ ಹೆಚ್ಚಾಗಿದೆ ಕೂಡಲೇ ಬ್ಯಾರಕ್‍ಗಳಲ್ಲಿ ಕೈದಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕೈದಿಗಳನ್ನು ಮನವೊಲಿಸಲು ಅಧಿಕಾರಿಗಳು ಯತ್ನಿಸಿದ್ದು, ಕೈದಿಗಳು ಮಾತ್ರ ತಮ್ಮ ಉಪವಾಸ ಬಿಡಲಿಲ್ಲ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *