ಬ್ಯಾಟಿಂಗ್ ಲಯಕ್ಕೆ ಮರಳಲು ಒಂದೂವರೆ ತಿಂಗಳು ಬೇಕು: ರೋಹಿತ್

ನವದೆಹಲಿ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಬ್ಯಾಟ್ಸ್‌ಮನ್‍ಗಳು ಫಾರ್ಮ್‍ಗೆ ಮರಳುವುದು ಸುಲಭವಲ್ಲ ವಿಷಯವಲ್ಲ ಎಂದು ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಚಾಟ್ ನಡೆಸಿದ್ದಾಗ ರೋಹಿತ್ ಈ ವಿಷಯ ತಿಳಿಸಿದ್ದಾರೆ. ಹಳೆಯ ಫಾರ್ಮ್‍ಗೆ ಮರಳಲು ಬ್ಯಾಟ್ಸ್‌ಮನ್‍ಗಳಿಗೆ ಕನಿಷ್ಠ ಒಂದೂವರೆ ತಿಂಗಳು ಬೇಕಾಗುತ್ತದೆ.

ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‍ಗಳು ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳುವುದು ಹೆಚ್ಚು ಸವಾಲಾಗಿದೆ ಎಂದು ರೋಹಿತ್ ಮೊಹ್ಮಮ್ ಶಮಿ ಅವರಿಗೆ ತಿಳಿಸಿದರು. ಬ್ಯಾಟ್ಸ್‌ಮನ್‍ಗಳಿಗೆ ಅಭ್ಯಾಸ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಅವರು 3 ತಿಂಗಳಿಗಿಂತ ಹೆಚ್ಚು ಕಾಲ ಮೈದಾನದಿಂದ ದೂರವಾಗಿದ್ದಾರೆ. ಈ ಸಮಯದಲ್ಲಿ ಅವರು ಬ್ಯಾಟ್ ಮುಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟ್ಸ್‌ಮನ್ ತನ್ನ ಲಯವನ್ನು ಮರಳಿ ಪಡೆಯುವುದು ಹೆಚ್ಚು ಕಷ್ಟಕರವಾಗಿರುತ್ತದೆ ಎಂದು ರೋಹಿತ್ ಹೇಳಿದರು.

ಲಾಕ್‍ಡೌನ್ ನಂತರ ಕ್ರಿಕೆಟ್ ಮೈದಾನಕ್ಕೆ ಮರಳುವ ಮೊದಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಒಂದು ತಿಂಗಳ ತರಬೇತಿ ಶಿಬಿರ ಇರಬೇಕು ಎಂದು ಶಮಿ ಅಭಿಪ್ರಾಯಪಟ್ಟಿದ್ದಾರೆ. “ಈ ಬಗ್ಗೆ ನಾನು ಆಶಿಶ್ ಭಾಯ್ (ಆಶಿಶ್ ನೆಹ್ರಾ) ಅವರೊಂದಿಗೆ ಮಾತನಾಡಿದ್ದೇನೆ. ಲಾಕ್‍ಡೌನ್ ಮುಗಿದ ತಕ್ಷಣ ನಾವು ಎನ್‍ಸಿಎಯಲ್ಲಿ ತರಬೇತಿ ಶಿಬಿರವನ್ನು ಪ್ರಾರಂಭಿಸಬೇಕು. ಇದು ಲಯವನ್ನು ಸಾಧಿಸಲು ನಮಗೆ ಸಹಾಯಕವಾಗುತ್ತದೆ. ಜೊತೆಗೆ ಬೌಲರ್ ಗಾಯಗೊಂಡಿದ್ದಾರೆಯೇ ಎಂದು ಸಹ ತಿಳಿಯಬಹುದಾಗಿದೆ ಎಂದು ಶಮಿ ತಿಳಿಸಿದರು.

Comments

Leave a Reply

Your email address will not be published. Required fields are marked *